ಜೆಒಸಿ ಕೋರ್ಸ್ ಪಿಯುಸಿಗೆ ಸಮಾನ : ಜೆಒಸಿ ಅಭ್ಯರ್ಥಿಗೆ 9:1ರ ಅನುಪಾತದಲ್ಲಿ ಉದ್ಯೋಗಕ್ಕೆ ಅವಕಾಶ
ಅನುಕಂಪದ ಆಧಾರದ ಮೇಲೆ ನೀಡುವ ಹಾಗೂ ಈಗಾಗಲೇ ನೇಮಕಾತಿ ಹೊಂದಿ ಆದೇಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಕೋರ್ಸ್ (ಜೆಒಸಿ)ಗಳು “ಪಿಯುಸಿ” ವಿದ್ಯಾರ್ಹತೆಗೆ ಸಮಾನವೆಂದು ಪರಿಗಣಿಸಿ ಸರಕಾರ ಆದೇಶ ಹೊರಡಿಸಿದೆ.
ಪಿಯುಸಿ ಅಥವಾ ಜೆಒಸಿ ಅಂಕಗಳನ್ನು ಪರಿಗಣಿಸದೆ ಕೇಲವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಗಣಿಸಿ ಉದ್ಯೋಗಕ್ಕೆ ಆಯ್ಕೆ ಮಾಡುವುದಾದರೆ ಜೆಒಸಿಯನ್ನು ಪಿಯುಸಿಗೆ ತತ್ಸಮಾನವೆಂದು ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಿ ಪರಿಗಣಿಸಬಹು ಎಂದು ತಿಳಿಸಿದೆ.
ಪಿಯುಸಿ ಅಥವಾ ಜೆಒಸಿ ಅಂಕಗಳನ್ನು ಪರಿಗಣಿಸದೆ ಕೇವಲ ಸ್ಪರ್ದಾತ್ಮಕ ಪರೀಕ್ಷೆ ಮೂಲಕ ಉದ್ಯೋಗಕ್ಕೆ ಆಯ್ಕೆ ಮಾಡುವುದಾದರೆ ಜೆಒಸಿ ಹಾಗೂ ಪಿಯುಸಿಯನ್ನು ಕನಿಷ್ಠ ಶಿಕ್ಷಣ ಅರ್ಹತೆ ಎಂದು ಪರಿಗಣಿಸಬಹುದು ಪಿಯುಸಿ ಮತ್ತು ಜೆಒಸಿ ಅಂಕಗಳನ್ನು ಆಧರಿಸಿ ಉದ್ಯೋಗಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಜೆಒಸಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ 9:1ರ ಅನುಪಾತದಲ್ಲಿ ಉದ್ಯೋಗಕ್ಕೆ ಅವಕಾಶ ನೀಡುವಂತೆ ವರದಿ ತಿಳಿಸಿತು.