ಪುರಾತನ ದೇವಸ್ಥಾನಗಳ ತೆರವು ವಿಚಾರ : ವಿಹಿಂಪ, ಬಜರಂಗದಳದಿಂದ ಪ್ರತಿಭಟನೆ
ಪುರಾತನವಾದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತುಘಲಕ್ ನೀತಿಯಂತೆ ಅಕ್ರಮವಾಗಿ ತೆರವು ಗೊಳಿಸಿವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಕಾರ್ಯಾಧ್ಯಕ್ಷರಾದ ಎಂ.ಬಿ. ಪುರಾಣಿಕ್ ಹೇಳಿದರು.
ಅವರು ರಾಜ್ಯದಲ್ಲಿ ಪುರಾತನ ದೇವಸ್ಥಾನ ತೆರವುಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಗರದ ಕದ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ ಸುಪ್ರೀಂ ಕೋರ್ಟ್ನ ಆದೇಶವನ್ನು ಸರಿಯಾಹಿ ಗ್ರಹಿಸಿದೆ ರಾತ್ರೋರಾತ್ರಿ ಹಲವಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಗಳನ್ನು ಕೆಡವಿ ಹಿಂದು ಸಮಾಜಕ್ಕೆ ನೋವುಂಟುಮಾಡಿದೆ. ಜಿಲ್ಲಾ ಸಮಿತಿ ದೇವಸ್ಥಾದ ಮಂಡಳಿ ಪ್ರತಿನಿಧಿಗಳೊಂದಿತಗೆ ಚರ್ಚಿಸಿ ಆ ದೇವಸ್ಥಾನ ಇತಿಹಾಸಮ ದೇವಸ್ಥಾನ ಇರುವ ಸ್ಥಳದಲ್ಲಿ ಇತ್ತೀಚೆಗೆ ರಸ್ತೆ ನಿಮಾರ್ಣವಾಗಿರುವ ವಿಚಾರ ಪರಿಶೀಲಿಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರೂ ಸಹ ಜಿಲ್ಲಾಡಳಿತ ಅವೈಜ್ಞಾನಿಕವಾಗಿ ದೇವಸ್ಥಾನಗಳನ್ನು ಕೆಡವಿರುವುದು ಖಂಡನೀಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್, ಶಿವಾನಂದ್ ಮೆಂಡನ್, ಬುಜಂಗ್ ಕುಲಾಲ್, ಪುನೀತ್ ಅತ್ತಾವರ ಮೊದಲಾದವರು ಭಾಗವಹಿಸಿದ್ದರು.