ಪ್ರಧಾನಿ ಮೋದಿ ಹುಟ್ಟುಹಬ್ಬ: 200ಮಂದಿ ದೈವ ದೇವರ ಚಾಕರಿಯವರಿಗೆ ಸನ್ಮಾನ : ಸಂತೋಷ್ ರೈ ಬೋಳಿಯಾರ್ ಹೇಳಿಕೆ

ಉಳ್ಳಾಲ : ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರು ಕ್ಷೇತ್ರ ಬಿಜೆಪಿ ವತಿಯಿಂದ ದೈವ- ದೇವರುಗಳ ಕಾರ್ಯದಲ್ಲಿ ಜೀವನದುದ್ದಕ್ಕೂ ದುಡಿದ ಉಳ್ಳಾಲ ತಾಲೂಕು ವ್ಯಾಪ್ತಿಯ ಕೊಣಾಜೆ ಹಾಗೂ ಇರಾ ಮಹಾಶಕ್ತಿಕೇಂದ್ರದ 12 ಗ್ರಾಮಗಳ 200 ಮಂದಿಗೆ ಅಭಿನಂದನಾ ಕಾರ್ಯಕ್ರಮ ಬೋಳಿಯಾರ್ ನ ಅಮರ್ ದೀಪ ಸಭಾಂಗಣದಲ್ಲಿ ಆ.13 ರಂದು ಮಧ್ಯಾಹ್ನ 3.00 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.

ಅವರು ಬೋಳಿಯಾರು ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಗದ ನೇಮಪಾತ್ರಿ, ತಂತ್ರಿಗಳು, ಅರ್ಚಕರು, ಅಜ್ಜನ ಕಟ್ಟೆಯಲ್ಲಿ ಸೇವೆಗೈಯ್ಯುವವರು, ಬಳೆ ಧರಿಸಿದ ಪೂಜಾರಿ ವರ್ಗ, ಮೂಲ್ಯಣ್ಣ ವರ್ಗ, ಗಡಿಹಿಡಿದವರು , ಭಜನಾ ಮಂದಿರಗಳ ಅರ್ಚಕರಿಗೆ ಅಭಿನಂದನೆ ನಡೆಯಲಿದೆ. ಈಗಾಗಲೆ 150 ಮನೆಗಳಿಗೆ ಪಕ್ಷದ ವತಿಯಿಂದ ಭೇಟಿ ನೀಡಿ ಆಹ್ವಾನಿಸಲಾಗಿದೆ. ಈ ಸಂದರ್ಭ ಪ್ರಧಾನಿ ಹಾಗೂ ಸಂಸದರು ತಂದುಕೊಟ್ಟ ಅನುದಾನ, ಸಾಧನೆಗಳ ಪ್ರಚಾರ ಕಾರ್ಯವೂ ನಡೆಯಲಿದೆ.

ಈ ಸಂದರ್ಭ ಮುಖಂಡರುಗಳಾದ ಜಯಶ್ರೀ ಕರ್ಕೇರ, ಮಂಗಳೂರು ಮಹಾ ಮಂಡಲದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ
, ನವೀನ್ ಪಾದಲ್ಪಾಡಿ, , ಉಪಾಧ್ಯಕ್ಷ ಯಶವಂತ ಅಮೀನ್, ರವಿಶಂಕರ್ ಸೋಮೇಶ್ವರ, ಕೊಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಶೆಟ್ಟಿ, ಇರಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೇರಾಜೆ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.