ಬನ್ನೂರಿನ ಕಜೆ ಎಂಬಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಮನೆ:ಕಾವು ಹೇಮನಾಥ್ ಶೆಟ್ಟಿ ಭೇಟಿ ಪರಿಶೀಲನೆ

ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕಜೆ ಎಂಬಲ್ಲಿಯ ನಿವಾಸಿ ಸಂತೋಷ್ ಎಂಬವರ ಮನೆಯ ದಕ್ಷಿಣ ಭಾಗದ ಮಣ್ಣನ್ನು ಪಕ್ಕದ ಮನೆಯವರು ಅವೈಜ್ಞಾನಿಕವಾಗಿ ಅಗೆದ ಕಾರಣ ವಿಪರೀತ ಮಳೆಯಿಂದ ಮಣ್ಣು ಕುಸಿಯುತ್ತಿದೆ.

ಕೆಲವೇ ಅಡಿಗಳ ಅಂತರದಲ್ಲಿ ಸಂತೋಷ್ ಅವರ ಮನೆಯು ಇರುವುದರಿಂದ ಮತ್ತು ಪಕ್ಕದ ಮನೆ ಸುಮಾರು 30  ಅಡಿಗಳಷ್ಟು ಆಳದಲ್ಲಿ ಇರುವುದರಿಂದ ಎರಡೂ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ್ ಶೆಟ್ಟಿಯವರು ಸ್ಥಳೀಯ ಗ್ರಾಮ ಲೆಕ್ಕಗರು ಮತ್ತು ತಹಶಿಲ್ದಾರರು ಸ್ಥಳ ಪರಿಶೀಲನೆ ಮಾಡಿ ಯಾರಿಗೂ ಯಾವುದೇ ಹಾನಿಯಾಗದ ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಬಿ.ರವಿಪ್ರಸಾದ್ ಶೆಟ್ಟಿ , ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕ ಇಸಾಕ್ ಸಾಲ್ಮರ, ವೇಣು ಗೋಪಾಲ ಮಣಿಯಾಣಿ ಮತ್ತಿತರು ಇದ್ದರು.

 

Related Posts

Leave a Reply

Your email address will not be published.