ಪುತ್ತೂರು: ಈ ದೇಶದ ಪ್ರಥಮ ಪ್ರಧಾನಿ ನೆಹರೂ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೀಳು ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಇವರು ತಮ್ಮ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ
ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕಜೆ ಎಂಬಲ್ಲಿಯ ನಿವಾಸಿ ಸಂತೋಷ್ ಎಂಬವರ ಮನೆಯ ದಕ್ಷಿಣ ಭಾಗದ ಮಣ್ಣನ್ನು ಪಕ್ಕದ ಮನೆಯವರು ಅವೈಜ್ಞಾನಿಕವಾಗಿ ಅಗೆದ ಕಾರಣ ವಿಪರೀತ ಮಳೆಯಿಂದ ಮಣ್ಣು ಕುಸಿಯುತ್ತಿದೆ. ಕೆಲವೇ ಅಡಿಗಳ ಅಂತರದಲ್ಲಿ ಸಂತೋಷ್ ಅವರ ಮನೆಯು ಇರುವುದರಿಂದ ಮತ್ತು ಪಕ್ಕದ ಮನೆ ಸುಮಾರು 30 ಅಡಿಗಳಷ್ಟು ಆಳದಲ್ಲಿ ಇರುವುದರಿಂದ ಎರಡೂ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ್