ಬೆಲೆ ಏರಿಕೆಯ ಬಗ್ಗೆ ನೈಜ ಕಾರಣ ಜನತೆಗೆ ತಿಳಿಸಲಿ: ಮಾಜಿ ಸಚಿವ ಯು.ಟಿ. ಖಾದರ್
ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆಯ ಬಗ್ಗೆ ನೈಜ ಕಾರಣವನ್ನು ಜನತೆಗೆ ತಿಳಿಸಲು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಶ್ವೇತ ಪತ್ರ ಹೊರಡಿಸಲಿ.ಬೆಲೆ ನಿಯಂತ್ರಣಕ್ಕೆ ತಕ್ಷಣ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ಅವರು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಂಧನದ ಬೆಲೆ ಏರಿಕೆಯ ಹಿಂದಿನ ಯುಪಿಎ ಸರಕಾರ ಪೆಟ್ರೋಲ್ ಕಂಪೆನಿಗಳಿಗೆ ನೀಡಿದ ಬಾಂಡ್ ಕಾರಣ ಎಂದು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಹಿಂದೆ ವಾಜಪೇಯಿ ನೇತ್ರತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಬಾಂಡ್ ನೀಡಲಾಗಿದೆ. ಬಾಂಡ್ ಮೂಲಕ ಪಾವತಿಯಾಗ ಬೇಕಾಗದ ಹಣ ಕೇವಲ 3,500 ಕೋಟಿ ರೂ ಮಾತ್ರ.ಉಳಿದ ಮೊತ್ತ ಎಲ್ಲಿಗೆ ಹೋಗುತ್ತದೆ.ನಿಜವಾಗಿ ಬೆಲೆ ಏರಿಕೆ ಕಾರಣ ಏನು ಎಂದು ತಿಳಿಸಲು ಸರಕಾರ ಶ್ವೇತ ಪತ್ರ ಹೊರಡಿಸ ಬೇಕಾದ ಅನಿವಾರ್ಯ ತೆ ಇದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ದೇಶದಲ್ಲಿ ಅಸಮರ್ಪಕ ಆರ್ಥಿಕ ನೀತಿ, ಸಮರ್ಥ ನಾಯಕತ್ವ ದ ಕೊರತೆ,ಜನ ಸಾಮಾನ್ಯ ರ ನಾಡಿ ಮಿಡಿತ ಅರಿಯಲು ಸಾಧ್ಯವಿಲ್ಲ ದೆ ಇರುವ ಸರಕಾರದಿಂದಾಗಿ ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಗಳು ಜನ ಸಾಮಾನ್ಯರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಆರೋಪಿಸಿದ್ರು. ಶ್ರೀರಾಮಲು ಆಪ್ತನ ವಂಚನೆ ಪ್ರಕರಣ ರಾಜ್ಯ ಸರಕಾರದ ಆಡಳಿತದ ರೀತಿಗೆ ಒಂದು ಉದಾಹರಣೆ.ಜನರು ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತಾರೆ ಎಂದು ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು,ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್ , ಸಂತೋಷ್ ಶೆಟ್ಟಿ, ಜಬ್ಬಾರ್ , ಸುರೇಶ್ ಭಟ್ನಗರ, ರಮೇಶ್ , ಜಕ್ರಿಯ, ಅಲ್ವಿನ್ ಡಿ ಸೋಜ ಮೊದಲಾದ ವರು ಉಪಸ್ಥಿತರಿದ್ದರು.