ಬೆಳ್ತಂಗಡಿಯಲ್ಲಿ ಭಾರೀ ಮಳೆಯ ಅವಾಂತರ

ಬೆಳ್ತಂಗಡಿಯಲ್ಲಿ ಬಾರೀ ಮಳೆಯಿಂದಾಗಿ ರಸ್ತೆಯೆಲ್ಲ ಚರಂಡಿಯಂತಾಗಿದೆ,ತಾಲೂಕಿನ ಕೊಕ್ಕಡ ಪೇಟೆಯಲ್ಲಿ ಸುರಿದ ಭಾರಿ ಮಳೆಗೆ ಚರಂಡಿಯಿಲ್ಲದೆ ರಸ್ತೆಯಲ್ಲೇ ನೀರು ಹೋಗುವಂತಾಗಿದೆ. ರಸ್ತೆಯ ಎರಡೂ ಬದಿಯ ಜಾಗಗಳನ್ನು ಕೆಲವು ವ್ಯಕ್ತಿಗಳು ಚರಂಡಿ ಮುಚ್ಚಿ ಅದನ್ನು ಆಕ್ರಮಿಸಿ ಕಂಡಿರುವುದೇ ಇದಕ್ಕೆ ಕಾರಣವಾಗಿದೆ. ಕೊಕ್ಕಡ ಗ್ರಾಮ ಪಂಚಾಯತ್ ಎದುರಿನಲ್ಲೇ ಅಷ್ಟೊಂದು ನೀರು ರಸ್ತೆಯಲ್ಲೇ ಹೋದರೂ ಪಂಚಾಯತ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಇದರ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದರೂ ಕೂಡ ಪಂಚಾಯತ್ ಅಧಿಕಾರಿ ಆಗಲಿ ಜನಪ್ರತಿ ನಿಧಿಗಳು ಆಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಹಲವು ವರ್ಷಗಳ ಸಮಸ್ಯೆಯಾಗಿದ್ದು ಕೆಲವರ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡದೆ ನೋಡಿಯೂ ನೋಡದಂತೆ ಇದ್ದಾರೆ,ಇದನ್ನು ಸರಿ ಪಡಿಸದಿದ್ದರೆ ಸಾರ್ವಜನಿಕವಾಗಿ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

 

Related Posts

Leave a Reply

Your email address will not be published.