ಮಂಗಳೂರಿನಲ್ಲಿ ಮತ್ತೆ ಅನೈತಿಕ ಪೊಲೀಸ್‍ಗಿರಿ ಪ್ರಕರಣ

ಮಂಗಳೂರಿನಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿಯ ಪ್ರಕರಣ ಬೆಳಕಿಗೆ ಬಂದಿದ್ದು, . ಮಂಗಳೂರಿನ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳು ಉಡುಪಿಗೆ ಪ್ರವಾಸ ಹೋಗಿ ವಾಪಾಸ್ ಬರುವಾಗ ಅವರ ವಾಹನವನ್ನು ತಡೆದು ಗುಂಪೊಂದು ಅನೈತಿಕಗಿರಿ ತೋರಿಸಿದೆ ಎಂದು ಆರೋಪಿಸಲಾಗಿದೆ.

ಮಂಗಳೂರು ನಗರದ ಹೊರವಲಯದ ಸುರತ್ಕಲ್ ಬಳಿ ಈ ಘಟನೆ ಭಾನುವಾರ ಸಂಜೆ ನಡೆದಿದೆ. ಮಂಗಳೂರಿನ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳು ಉಡುಪಿಗೆ ಪ್ರವಾಸ ಹೋಗಿ ವಾಪಾಸ್ ಬರುವಾಗ ಅವರ ವಾಹನವನ್ನು ತಡೆದು ಗುಂಪೊಂದು ಅನೈತಿಕಗಿರಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅನ್ಯಕೋಮಿನ ಯುವಕ-ಯುವತಿಯರಿದ್ದ ಬೊಲೇರೋ ಜೀಪನ್ನು ಅ ತಡೆದು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಯುವಕರ ಗುಂಪು ಮುಂದಾದಾಗ ಮಾಹಿತಿ ಪಡೆದ ಪೊಲೀಸ್ ಇನ್ಸ್ಪೆಕ್ಟರ್ ಶರೀಫ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಭಾಯಿಸಿ ವಿದ್ಯಾರ್ಥಿಗಳನ್ನು ವಾಹನ ಸಮೇತ ಠಾಣೆಗೆ ಕರೆ ತಂದಿದ್ದಾರೆ.

 

Related Posts

Leave a Reply

Your email address will not be published.