ಮಂಜೇಶ್ವರ: ಕಾವಲುಗಾರನ ತೆಲೆಗೆ ಹೊಡೆದು ಗೋಣಿಯಲ್ಲಿ ಕಟ್ಟಿ ಹಾಕಿ ದರೋಡೆ

ಕಾವಲುಗಾರನ ತಲೆಗೆ ಹೊಡೆದು ಗೋಣಿಯೊಯೊಳಗೆ ಕಟ್ಟಿ ಹಾಕಿ ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರಿಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಭಾರಿ ಮೌಲ್ಯದ ಬೆಳ್ಳಿ ಆಭರಣ ಹಾಗೂ ಲಕ್ಷಾಂತರ ರೂ. ನಗದನ್ನು ಕೊಂಡೊಯ್ದಿದ್ದಾರೆ.manjeshwara robbery case

ಕಳೆದ ರಾತ್ರಿ ಎರಡು ಗಂಟೆಯ ಸುಮಾರಿಗೆ ಎರಡು ಕಾರಿನಲ್ಲಿ ಆಗಮಿಸಿದ ಎಂಟು ಮಂದಿಯ ತಂಡ ಈ ಕೃತ್ಯ ನಡೆಸಿದೆ. ಕಾವಲುಗಾರ ಕಡಂಬಾರ್ ನಿವಾಸಿ ಅಬ್ದುಲ್ಲ ದರೋಡೆಕೋರರ ಹಲ್ಲೆಯಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಜ್ಯುವೆಲ್ಲರಿಯೊಳಗಿದ್ದ ಹದಿನೈದು ಕಿಲೋ ಬೆಳ್ಳಿ ಹಾಗು ನಾಲ್ಕೂವರೆ ಲಕ್ಷ ರೂ. ನಗದನ್ನು ಕಳ್ಳರು ದೋಚಿದ್ದಾರೆ.manjeshwara robbery caseಕಾಸರಗೋಡು ಡಿವೈ ಎಸ್ಪಿ ಬಾಲಕೃಷ್ಣ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

 

Related Posts

Leave a Reply

Your email address will not be published.