ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ : ಹೆರಿಟೇಜ್ ಜುವೆಲ್ಲರಿಯ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ
ಉಡುಪಿ:ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಇಂದಿನಿಂದ ಹೆರಿಟೇಜ್ ಜುವೆಲ್ಲರಿಯ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಉಡುಪಿಯ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಮಳಿಗೆಯಲ್ಲಿ ಪ್ರಪಥಮ ಬಾರಿಗೆ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಬ್ರಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಅಜೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ ಪೈ ವಿಶಿಷ್ಟ ರೀತಿಯ ಅಕಷಕ ಸ್ವರ್ಣಾಭರಣಗಳನ್ನು ಅನಾವರಣಾಗೊಳಿಸುವ ಚಾಲನೆ ನೀಡಿದ್ರು.
ಹೆರಿಟೇಜ್ ಚಿನ್ನಾಭರಣಗಳ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹ ಗಳಿವೆ ’ಮೈನ್’ ನಲ್ಲಿ ವಜ್ರಾಭರಣಗಳ ಅಭೂತಪೂರ್ವ ಸಂಗ್ರಹ,ನವ ವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಾಮಾಣಿಕೃತ ವಜ್ರಾಭರಣಗಳು,’ಡಿವೈನ್’ ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಚಿನ್ನಾಭರಣಗಳ ಸಂಗ್ರಹ, ’ಪ್ರಶಿಯಾ’ ದಲ್ಲಿ ರುಬಿ,ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು,’ಎಥಿನಿಕ್ಸ್’ ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ,’ಏರ’ ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹಗಳು ಗ್ರಾಹಕರ ಮನಸೋರೆಗೊಂಡಿದೆ.ಅದ್ಭುತ ಪಾರಾಂಪರಿಕಾ ಚಿನ್ನಾಭರಣಗಳನ್ನು ತೊಟ್ಟ ಬೆಡಗಿಯರು ಇನ್ನಷ್ಟು ಮೆರಗು ಹೆಚ್ಚಿಸಿದರು.ಅಪಟ್ಟ ದೇಸಿ ಕಲೆಕ್ಷನ್ಸ್ ತೊಟ್ಟು ಮಲಬಾರ್ ಗೋಲ್ಡ್ ಮಳಿಗೆಯಲ್ಲಿ ನಡೆಸಿದ ಕ್ಯಾಟ್ ವಾಕ್ ಇಡೀ ಕಾರ್ಯಕ್ರಮದ ರಂಗು ಮತ್ತಷ್ಟು ಹೆಚ್ಚಿಸಿತ್ತು.
ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಅವರು ಕಾರ್ಯಕ್ರಮಕ್ಕೆ ಅಗಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು, ಹೆರಿಟೇಜ್ ಜುವೆಲ್ಲರಿಯ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟದ ಪ್ರಯೋಜವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಮಲಬಾರ್ ಗೋಲ್ಡ್ ನಲ್ಲಿ ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ, ಬೈ ಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣ ಸಹ ಹಾಲ್ ಮಾರ್ಕ್ ಹೊಂದಿದ್ದು,೨೮ ರೀತಿಯ ಪರೀಕ್ಷೆ ಮಾಡಿದ ಐ ಜಿ ಐ ಮತ್ತು ಜಿ.ಐ.ಏ ಪ್ರಾಮಾಣಿಕೃತ ವಜ್ರಾಭರಣಗಳು,ಮದುವೆ ಖರೀದಿಗಳಿಗಾಗಿ ಮುಂಗಡ ೫% ರಿಂದ ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಿನ್ನದ ದರದಲ್ಲಿ ಆಗುವ ಏರಿಳಿತದಿಂದ ಸಂರಕ್ಷಿಸ ಬಹುದು ಇದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವಿಶೇಷತೆಗಳಾಗಿವೆ.