ಮೀರಾ ಕ್ಲೀನ್ ಪ್ಯೂಯಲ್ ಲಿಮಿಡೆಟ್ ಬಗೆಗೆ ಕಾರ್ಯಾಗಾರ
ಪರಿಸರಸ್ನೇಹಿ ಮತ್ತು ರೈತಸ್ನೇಹಿ ಸಂಸ್ಥೆ ಮೀರಾ ಕ್ಲೀನ್ ಪ್ಯೂಯಲ್ ಲಿಮಿಡೆಟ್ ( ಎಂ.ಸಿ.ಎಲ್) ಘಟಕವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸುವ ಉದ್ದೇಶದಿಂದ ಸ್ವರ್ಣಮಂದಿರದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಪ್ರಕೃತಿ ವಿರುದ್ಧವಾಗಿ ಬದುಕುದನ್ನು ನಾವು ನಿಲ್ಲಿಸಬೇಕು. ಪ್ರಕೃತಿಯನ್ನು ಆರಾಧಿಸುವ ಜೊತೆಗೆ ಇಲ್ಲಿ ಸಿಗುವ ಸಂಪನ್ಮೂಲಗಳನ್ನು ಶಕ್ತಿಯಾಗಿ ಪರಿವರ್ತಿಸಿ ಪರಿಸರ ಸ್ನೇಹಿಯಾಗಬೇಕು. ಪ್ರಕೃತಿ ಉಳಿವು, ಗ್ರಾಮೀಣ ಭಾಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿರುವ ಎಂ.ಸಿ.ಎಲ್ ಸಂಸ್ಥೆಯು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ನುಡಿದರು.
ಮುಂಬೈ ಎಂ.ಸಿ.ಎಲ್ ಪ್ರೈಮ್ ಬಿಡಿಎ ಶ್ರವಣ್ ಮಾಣೆ ಮುಖ್ಯ ಅತಿಥಿಯಾಗಿ ಮಾತನಾಡಿ, ಜಾಗತಿಕ ತಾಪಮಾನದಿಂದಾಗಿ ಇಂದು ಜನಜೀವನ ನಲುಗಿದೆ. ದೇಶದ ರೈತರಿಗೆ ಆರ್ಥಿಕ ಸಶಕ್ತತೆಯನ್ನು ಮೂಡಿಸುವುದರೊಂದಿಗೆ ಜೈವಿಕ ಇಂಧನವನ್ನು ಉತ್ಪಾದಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.ಎಂ.ಸಿ.ಎಲ್ ಸೀನಿಯರ್ ಬಿಡಿಎ ವಸಂತ ಎನ್. ಪೂಜಾರಿ, ಬಿಡಿಎ ರಾಮಚಂದ್ರ ಕೆಂಬಾರೆ, ಬಿಡಿಎ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.ತಾಲೂಕು ಘಟಕಗಳ ಮುಖ್ಯ ಪ್ರಮೋಟರ್‍ಗಳನ್ನು ಗೌರವಿಸಿದರು.ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ವಂದಿಸಿದರು.