ಮುನ್ನೂರು ಗ್ರಾಮದ ಮದನಿ ನಗರದಲ್ಲಿ ತ್ಯಾಜ್ಯ ಸಮಸ್ಯೆ : ರಾತ್ರೋ ರಾತ್ರಿ ಮುಕ್ತಿ ಕಾಣಿಸಿದ ಗ್ರಾಪಂ ಸದಸ್ಯೆ

ಶೈಕ್ಷಣಿಕ ಮತ್ತು ಮೆಡಿಕಲ್ ಹಬ್ ಎಂದೇ ಗುರುತಿಸಲ್ಪಟ್ಟಿರುವ ಕುತ್ತಾರ್-ದೇರಳಕಟ್ಟೆ ಪರಿಸರದ ಪ್ರಮುಖ ರಸ್ತೆಯ ಬದಿ ಅಂದರೆ ಮದನಿ ನಗರದ ಮೂರನೆ ಅಡ್ಡರಸ್ತೆಯ ಬಳಿ ರಾಶಿ ಹಾಕಲಾಗಿದ್ದ ತ್ಯಾಜ್ಯ ವಸ್ತುವನ್ನು ಮುನ್ನೂರು ಗ್ರಾಮದ 5ನೆ ವಾರ್ಡಿನ ಸದಸ್ಯೆ ರೆಹನಾ ಭಾನು ತಡರಾತ್ರಿಯವರೆಗೂ ಸ್ವತಃ ನಿಂತು ತೆರವುಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದೊಂದು ವಾರದಿಂದ ತ್ಯಾಜ್ಯ ವಸ್ತುಗಳು ರಾಶಿ ಬೀಳುತ್ತಿತ್ತು. ಇದರಿಂದ ಪರಿಸರ ಗಬ್ಬೆದ್ದು ನಾರುತ್ತಿತ್ತಲ್ಲದೆ ಸಾರ್ವಜನಿಕರು ಮೂಗುಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಪಂ ಗೂ ಸಾರ್ವಜನಿಕರಿಂದ ದೂರು ಕೂಡ ಹೋಗಿತ್ತು. ಅದರಂತೆ 5ನೆ ವಾರ್ಡಿನ ಗ್ರಾಪಂ ಸದಸ್ಯೆ ರೆಹನಾ ಭಾನು ಮೊನ್ನೆ ರಾತ್ರಿ ಜೆಸಿಬಿ ಬಳಸಿ ರಸ್ತೆ ಬದಿ ರಾಶಿ ಹಾಕಲಾಗಿದ್ದ ತ್ಯಾಜ್ಯವನ್ನು 5-6 ಟಿಪ್ಪರ್ ಮೂಲಕ ತಡರಾತ್ರಿಯವರೆಗೂ ಸ್ವತಃ ಸ್ಥಳದಲ್ಲಿ ನಿಂತು ತೆರವುಗೊಳಿಸಿದ್ದಾರೆ.

Related Posts

Leave a Reply

Your email address will not be published.