ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಕೊಡುವುದಕ್ಕೆ ಆಗಿಲ್ಲ: ಡಿ.ಕೆ. ಶಿವಕುಮಾರ್
ಮಂಗಳೂರು: ಈ ರಾಜ್ಯದಲ್ಲಿ ಒಳ್ಳೆ ಸರ್ಕಾರ ಕೊಡುವುದಕ್ಕೆ ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ರು ಒಳ್ಳೆ ಆಡಳಿತ ಕೊಡಲು ಆಗಿಲ್ಲ. ಈ ಸರ್ಕಾರಕ್ಕೆ ಗೌರವ ಎಲ್ಲಿದೆ. ಅವರಲ್ಲಿ ಎಷ್ಟೇ ಮುಖ್ಯಮಂತ್ರಿ ಚೇಂಜ್ ಆದ್ರು ಅವರ ಪಕ್ಷದ ಬಗ್ಗೆ ಮಾತಾಡಲ್ಲ ಎಂದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಂಗಳೂರಿನಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು.
ಯಾವ ಅಧಿಕಾರಿಗಳು ಅವರ ಮಾತು ಕೇಳ್ತಾರೆ. ತರಾತುರಿಯಲ್ಲಿ ಎಲ್ಲಾ ಫೈಲ್ ಗಳ ಸಹಿ ಆಗ್ತಿದೆ. ಅದರಲ್ಲು ನೀರಾವರಿ ಇಲಾಖೆಯಲ್ಲಿ ಎಷ್ಟೋ ಫೈಲ್ ಕ್ಲಿಯರ್ ಆಗ್ತಿದೆ. ಅಸೆಂಬ್ಲಿ ಬಂದಾಗ ದಾಖಲೆಯೆಲ್ಲ ತೆಗೆದು ಮಾತಾಡ್ತೇನೆ. ಯಾರಾದರೂ ಕಾಂಗ್ರೆಸ್ ಬರೋರಿದ್ರೆ ಅರ್ಜಿ ಸಲ್ಲಿಸಲಿ. ಆಮೇಲೆ ಕೂತು ಮಾತಾನಾಡೋಣ.
ಕಾಂಗ್ರೆಸ್ ಪಾರ್ಟಿಗೆ ಬರಬೇಕು ಅಂತಾ ಇಷ್ಟ ಇರೋರು ಬಹಳಷ್ಟು ಜನ ಇದ್ದಾರೆ. ಅವರ ಹೆಸರು ಹೇಳೋದಕ್ಕೆ ಹೋಗಲ್ಲ. ಚುನಾವಣೆ ಟೈಮಲ್ಲಿ ಹೋಗಿ ಮಾತಾನಾಡಿಸಿದಕ್ಕೆ ಮಠಾಧೀಶರು ಬಂದಿದ್ದಾರೆ. ನೀವೆ ಹೋಗಿಲ್ಲ ಅಂದ್ರೆ ಹೇಗೆ ಬರ್ತಿದ್ರು. ಅವರ ಅಭಿಪ್ರಾಯ ಅವರು ಹೇಳ್ತಾ ಇದ್ದಾರೆ. ಅವರ ತಪ್ಪುಅಂತಾ ಹೇಳ್ತಿಲ್ಲ ಎಂದು ಮಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.