ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಗ್ಮಾ 2021: 19ನೇ ವಾರ್ಷಿಕ ಸಮ್ಮೇಳನ

ಮಂಗಳೂರು:ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್  ಹಾಗೂ ಉತ್ತರ ಅಮೆರಿಕದಐ.ಎಸ್.ಎಂ.ಎ.ಸಿ.ಐ., ಅಜ್ಟೆಕಾ ವಿಶ್ವವಿದ್ಯಾಲಯ, ಮೆಕ್ಸಿಕೊ ಇದರ ಸಹಯೋಗದೊಂದಿಗೆ 19 ನೇ ವಾರ್ಷಿಕ ಒಂದು ದಿನದ ರಾಷ್ಟ್ರೀಯ ಸಮ್ಮೇಳನ – ʼಮ್ಯಾನೆಗ್ಮಾ 2021ʼವನ್ನುಜೂನ್‌ 16 ಬುಧವಾರದಂದು ಆಯೋಜಿಸಲಾಯಿತು.

“ಸ್ಥಿತಿಸ್ಥಾಪಕತ್ವ, ಆವಿಷ್ಕಾರ ಹಾಗೂ ಮರುಶೋಧನೆ – ಪ್ರಕ್ಷುಬ್ಧ ಸಮಯವನ್ನು ನಿಭಾಯಿಸುವುದು”, ಎಂಬವಿಷಯದ ಕುರಿತು ಸಮ್ಮೇಳನವನ್ನುಹಮ್ಮಿಕೊಳ್ಳಲಾಯಿತು. ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನುಶ್ರೀನಿವಾಸ್‌ ವಿಶ್ವವಿದ್ಯಾಲಯದಕುಲಪತಿ ಡಾ.ಪಿ.ಎಸ್. ಐತಾಳ್‌ ವಹಿಸಿಮಾತನಾಡಿ, ಕೋವಿಡ್‌ನಂತಹ ಈ ಕಠಿಣಸಮಯದಲ್ಲಿಉಂಟಾಗಿರುವ ಪ್ರಕ್ಷುಬ್ಧ ಸಮಯವನ್ನು ನಿಭಾಯಿಸಲು ನವೀಕರಿಸಬೇಕಾದ ಅಗತ್ಯತೆಯಿಂದ ಆನ್‌ಲೈನ್ ಸಂವಹನ ತಂತ್ರಜ್ಞಾನವನ್ನುಎಲ್ಲರೂ ಎಲ್ಲಿ ಬೇಕಾದರು ಬಳಸಬಹುದು ಎಂದರು.

ಮುಖ್ಯ ಅತಿಥಿಯಾಗಿ, ಮೆಕ್ಸಿಕೊದ ಅಜ್ಟೆಕಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಮುಖ್ಯ ಮಾರ್ಗದರ್ಶಕ, ನಿರ್ದೇಶಕ ಮತ್ತು ಅಧ್ಯಕ್ಷ ಡಾ. ರಿಕಾರ್ಡೊ ಸವೀದ್ರಾ ಅವರು ಇಂದಿನ ಯುವಜನರಿಗೆ ಜಾಗತಿಕವಾಗಿ ಒಡ್ಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು ಜೊತೆಗೆಶ್ರೀನಿವಾಸ್ ವಿಶ್ವವಿದ್ಯಾಲಯದ ಕಾರ್ಯವನ್ನುಶ್ಲಾಘಿಸಿದರು. ಪಶ್ಚಿಮ ಬಂಗಾಳದ ರಾಯಗಂಜ್ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಪಿ.ಕೆ.ಪಾಲ್ ಅವರು ತಾಂತ್ರಿಕ ಪ್ರಸ್ತುತಿ ಸಮಿತಿಯನ್ನು ಅಧಿವೇಶನ ಅಧ್ಯಕ್ಷರಾಗಿ ಸುಗಮಗೊಳಿಸಿದರು.

ಮುಖ್ಯ ಭಾಷಣಕಾರಾಗಿ ಅಜ್ಟೆಕಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ವಿದ್ವಾಂಸ ಮತ್ತು ಪ್ರಸ್ತುತ ನೈಜೀರಿಯಾದ ರಾಷ್ಟ್ರೀಯ ಆರೋಗ್ಯ ವಿಮಾ ಸೇವೆಗಳ ಅಧ್ಯಕ್ಷರಾದ ಡಾ. ಕೆನ್ನೆತ್ ಒಕಿಯಾಫರ್ ಅವರು ಆರೋಗ್ಯ ರಕ್ಷಣೆಯಲ್ಲಿ ಸೈಬರ್‌ ಸುರಕ್ಷತೆಯ ಅಗತ್ಯತೆ ಮತ್ತು ಮಹತ್ವದ ಕುರಿತು ಮಾತನಾಡಿದರು.

ಆಡ್ರಿಕನ್ ಏಷ್ಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ಜಿ ಡಿ ಸಿಂಗ್ ಅವರು ಜಾಗತಿಕ ನಾಗರಿಕರು ಜಾಗತಿಕ ವ್ಯವಹಾರದ ಸನ್ನಿವೇಶದ ಬಗ್ಗೆ ಸಾಕಷ್ಟು ಒಳನೋಟಗಳನ್ನು ನೀಡಿದರು ಮತ್ತು ಯಶಸ್ವಿ ವ್ಯಾಪಾರ ವೃತ್ತಿಪರರಾಗಲು ಒಂದಷ್ಟುಮಾರ್ಗದರ್ಶನ ನೀಡಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ನಾರಾಯಣ್ ಕಾಯರ್‌ಕಟ್ಟೆ, ವೈಯಕ್ತಿಕ ಅಭಿವೃದ್ಧಿಶೀಲ ಟಿಪಿ ಮುಂದೆ ಇರಬೇಕಾದ ಅಗತ್ಯತೆ ಮತ್ತು ಇಂದಿನ ಪ್ರಕ್ಷುಬ್ಧ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳಬಗ್ಗೆತಿಳಿಸಿದರು.

ಈ ಸಮ್ಮೇಳನದಲ್ಲಿ ಒಟ್ಟು107ಸಂಶೋಧನಾಬರಹಗಳನ್ನುಸ್ವೀಕರಿಸಿ, ದಿನವಿಡೀ ಮೂರು ತಾಂತ್ರಿಕ ಅಧಿವೇಶನಗಳಲ್ಲಿ ಇವುಗಳನ್ನುಮಂಡಿಸಲಾಯಿತು. 380 ಕ್ಕೂ ಹೆಚ್ಚು ಸಂಶೋಧನಾವಿದ್ಯಾರ್ಥಿಗಳು, ಅದ್ಯಾಪಕರು ಆನ್‌ಲೈನ್‌ ವೇದಿಕೆಯ ಮೂಲಕ ಭಾಗವಹಿಸಿದರು.  ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕುಲಾಧಿಪತಿಡಾ.ಸಿಎ.ಎ.ರಾಘವೇಂದ್ರರಾವ್‌ರವರು ಸಮ್ಮೇಳನದ ಮುಖ್ಯ ಪ್ಯಾಟ್ರನ್‌ ರಾಗಿ ಪಾಲೊಂಡಿದ್ದರು.ಸಹಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್,ವಿಜಯಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಿರ್ದೇಶಕಿ ವಿಜಯಲಕ್ಷ್ಮಿ ಆರ್.ರಾವ್, ಎ.ಶ್ಯಾಮ ರಾವ್ ಪ್ರತಿಷ್ಠಾನದ ಕಾರ್ಯದರ್ಶಿ ಮಿತ್ರ ಎಸ್.ರಾವ್. ಸಹಪ್ಯಾಟ್ರನ್ರಾಗಿ ಪಾಲ್ಗೊಂಡಿದ್ದರು.

ಕಾಲೇಜ್‌ ಆಫ್‌ ಮ್ಯಾನೇಜ್ಮೆಂಟ್ &ಕಾಮರ್ಸ್ ನ ಡೀನ್ ಪ್ರೊ. ಕೀರ್ತನಾ ರಾಜ್ ಸ್ವಾಗತಿಸಿ,ಎಂಬಿಎ ವಿಭಾಗಸಂಯೋಜಕ ಪ್ರೊ. ಅಮಿತ್ ಮೆನೆಜೆಸ್ ಸಮಾವೇಶವನ್ನು ಕರೆದರು. ಬಿಬಿಎಪೋರ್ಟ್, ಶಿಪ್ಪಿಂಗ್ ಮ್ಯಾನೇಜ್‌ಮೆಂಟ್ ಆಂಡ್ ಲಾಜಿಸ್ಟಿಕ್ಸ್ ವಿಭಾಗದ ಸಂಯೋಜಕಿಡಾ. ಸೋನಿಯಾ ನೊರೊನ್ಹಾ ವಂದಿಸಿದರು. 

ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ಕಾಮರ್ಸ್ವು ಬಿಬಿಎ, ಬಿ.ಕಾಂ, ಎಂಬಿಎ ಮತ್ತು ಎಂ.ಕಾಂನಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ. ಉದ್ಯಮಕ್ಕೆ ಸಿದ್ಧರಾಗಿರುವ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಉದ್ದೇಶಕ್ಕೆ ಅನುಗುಣವಾಗಿ, ಕಾಲೇಜು ಸೂಪರ್ ಸ್ಪೆಷಲೈಸೇಶನ್ ಪದವಿಗಳಾದ ಎಸಿಸಿಎ, ಸಿಎಫೌಂಡೇಶನ್‌, ಯುಎಸ್ಎ ಸಿಎಂಎ ಪಠ್ಯಕ್ರಮದೊಂದಿಗೆ ಬಿ.ಕಾಂ ಪದವಿ ಹಾಗೂ ಬಿಬಿಎ ವಿಭಾಗದಲ್ಲಿ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್‌ನಲ್ಲಿ, ಯುಎಸ್‌ಎ ಸಿಎಮ್ಎಸ್ ಪಠ್ಯಕ್ರಮದೊಂದಿಗೆ ಸಂಯೋಜಿತ ಬಿಬಿಎ, ಬಿಬಿಎ ಯುಎಸ್‌ಎ ಸಿಎಮ್ಎ ಪಠ್ಯಕ್ರಮದೊಂದಿಗೆ ಸಂಯೋಜನೆಗೊಂಡಿದೆ, ಬಿಬಿಎ ಸಮಗ್ರ ಐಎಎಸ್ ತರಬೇತಿಯೊಂದಿಗೆಎಸ್‌ಎಸ್‌ಸಿ ನೇಮಕಾತಿ ಸೇರಿದಂತೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. 

Related Posts

Leave a Reply

Your email address will not be published.