ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೊ ಫೌಂಡೇಶನ್ ಸಹಯೋಗದೊಂದಿಗೆ ಶುದ್ಧ ಗಂಗಾ ಘಟಕಗಳಿಗೆ ಸೋಲಾರ್ ಇನ್ವರ್ಟರ್ ಅಳವಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸೆಲ್ಕೋ ಪೌಂಡೇಶನ್ ಸಿ ಇ ಒ ರವಾರಾದ ಡಾ. ಹರೀಶ್ ಹಂದೆ ತಿಳಿಸಿದರು.

ಅವರು ಧರ್ಮಸ್ಥಳದಲ್ಲಿ ಮಾತನಾಡಿ ರಾಜ್ಯದಾದ್ಯಂತ ಕಡು ಬಡವರಿಗೆ ಅತೀ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವ ಯೋಜನೆಯ ಈ ಮಹತ್ವಾಕಾಂಕ್ಷೆ ಕಾರ್ಯಕ್ರಮವನ್ನು ಗಮನಿಸಿ ಸೇಲ್ಕೊ ಇದೀಗ ಆಯ್ದ 40 ಶುದ್ಧ ಗಂಗಾ ಘಟಕಗಳಿಗೆ ಉಚಿತ ಸೋಲಾರ್ ಇನ್ವರ್ಟರ್ಗಳನ್ನು ಅಳವಡಿಸುತ್ತಿದ್ದೇವೆ,ಪ್ರತಿ ಘಟಕಕ್ಕೆ ಸುಮಾರು ೬ ಲಕ್ಷ ವೆಚ್ಚದ ಈ ಯೋಜನೆ ಸುಮಾರು ೪೦ ಘಟಕಕ್ಕೆ 2.40 ಕೋಟಿ ವೆಚ್ಚ ತಗುಳಲಿದೆ, ಈ ವೆಚ್ಚವನ್ನು ಪೂರ್ತಿಯಾಗಿ ಸೆಳ್ಕೊ ಪೌಂಡೇಶನ್ ಭರಿಸಲಿದೆ ಅಲ್ಲದೆ ಒಂದು ವರ್ಷದವರೆಗೆ ನಿರ್ವಹಣೆ ಕೂಡ ನಾವೇ ಮಾಡಲಿದ್ದೇವೆ ಎಂದು ಹೇಳಿದರು.ನಂತರ ಮಾತನಾಡಿದ ಪೂಜ್ಯ ಹೆಗ್ಗಡೆಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಪೂರ್ಣ ಸೋಲಾರಿನಿಂದಲೆ ನಡೆಸುವ ಹೊಸ ಪ್ರಯತ್ನ ಇದಾಗಳಿದ್ದು ಈ ವಿನೂತನ ಕಾರ್ಯಕ್ರಮ ಯಶಸ್ಸು ಆಗಲಿ ಎಂದು ಹೇಳಿದರು, ನಂತರ ಒಪ್ಪಂದ ಪತ್ರಗಳ ವಿನಿಮಯ ಮಾಡಿಕೊಳ್ಳಲಾಯಿತು.
