ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೊ ಫೌಂಡೇಶನ್ ಸಹಯೋಗದೊಂದಿಗೆ ಶುದ್ಧ ಗಂಗಾ ಘಟಕಗಳಿಗೆ ಸೋಲಾರ್ ಇನ್ವರ್ಟರ್ ಅಳವಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸೆಲ್ಕೋ ಪೌಂಡೇಶನ್ ಸಿ ಇ ಒ ರವಾರಾದ ಡಾ. ಹರೀಶ್ ಹಂದೆ ತಿಳಿಸಿದರು. ಅವರು ಧರ್ಮಸ್ಥಳದಲ್ಲಿ ಮಾತನಾಡಿ ರಾಜ್ಯದಾದ್ಯಂತ ಕಡು ಬಡವರಿಗೆ ಅತೀ ಕಡಿಮೆ ವೆಚ್ಚದಲ್ಲಿ ಶುದ್ಧ
ಕೊರೊನಾದ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮಕ್ಕೆ ಇದೀಗ ಖಾಸಗಿ ವಿಮಾನಗಳ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ರವಿವಾರದಂದು ಪುಣೆಯಲ್ಲಿರುವ13 ಮಂದಿಯನ್ನು ಹೊಂದಿರುವ ಕುಟುಂಬವೊಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ ಜಿಲ್ಲೆಯ ವಿವಿಧ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡಿದ್ದಾರೆ. ಜೆಟ್ ಬಂದಿಳಿದಿದ್ದು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರವಾಸಿಗರನ್ನು ಸ್ವಾಗತಿಸಿದರು.
ಮೈಸೂರು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೂ ಅನಧಿಕೃತ ದೇವಸ್ಥಾನ ಇಲ್ಲ ಇರೋದೆಲ್ಲವೂ ಅಧೀಕೃತ ದೇವಸ್ಥಾನಗಳೇ ಅನಧಿಕೃತ ಇದ್ರೆ ಅದನ್ನು ಅಧೀಕೃತ ವನ್ನಾಗಿ ಮಾಡಬೇಕು ಕಾನೂನು ಯಾರನ್ನೂ ಬಿಡೋದಿಲ್ಲ ಕಾನೂನನ್ನು ಎಲ್ಲರೂ ಪಾಲನೆ ಮಾಡಬೇಕು ಅನಧಿಕೃತ ದೇವಸ್ಥಾನಗಳಿದ್ದರು ಅದನ್ನು ಅಧೀಕೃತ ಮಾಡಬೇಕು ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.
ರಾಜ್ಯದ್ಯಾಂತ ಜುಲೈ 5ರಿಂದ ಅನ್ಲಾಕ್ 3.0 ಜಾರಿಯಲ್ಲಿರಲಿದ್ದು, ದೇವಾಲಯಗಳು ನಾಳೆಯಿಂದ ಓಪನ್ ಆಗಲಿದ್ದು, ಭಕ್ತರ ದರುಶನಕ್ಕೆ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಪೂರ್ಣ ಸ್ಯಾನಿಟೈಸೇಷನ್ ಕಾರ್ಯ ಮಾಡಲಾಗುತ್ತಿದೆ. ದೇವಸ್ಥಾನದ ಒಳಾಂಗಣ, ಹೊರಾಂಗಣ, ಅನ್ನಛತ್ರ, ವಸ್ತು ಸಂಗ್ರಹಾಲಯದಲ್ಲಿ ದೇವಳದ ಸಿಬ್ಬಂದಿಯಿಂದ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ನಾಳೆಯಿಂದ ಶ್ರೀ ಕ್ಷೇತ್ರ