ದೋಣಿ ದುರಂತದಲ್ಲಿ ಮೃತರಾದ ಮೀನುಗಾರ ಶೆರೀಫ್ ಕುಟುಂಬಕ್ಕೆ ಪರಿಹಾರ ಒದಗಿಸಲು ಆಗ್ರಹ
ವಾರದ ಹಿಂದೆ ಮೀನುಗಾರಿಕೆಯ ಸಂದರ್ಭ ದೋಣಿ ಮಗುಚಿ ಮೃತರಾದ ಕಸ್ಬಾ ಬೆಂಗ್ರೆಯ ನಿವಾಸಿ ಶೆರೀಫ್ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಧನ ನೀಡುವಂತೆ ಕೋರಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್ ಅವರಿಗೆ “ಸಾಂಪ್ರದಾಯಿಕ ಮೀನುಗಾರರ ಸಂಘ” ದ ವತಿಯಿಂದ ಮನವಿ ಸಲ್ಲಿಸಲಾಯಿತು.
ವೃದ್ದೆ ತಾಯಿ, ಸಹೋದರಿ, ಹೆಂಡತಿ, ಮೂರು ಸಣ್ಣ ಮಕ್ಕಳಿರುವ ಕುಟಂಬಕ್ಕೆ ಶೆರೀಫ್ ದುಡಿಮೆಯೇ ಆಧಾರವಾಗಿತ್ತು. ದಿಢೀರ್ ನಡೆದ ದುರಂತದಿಂದ ಮೃತ ಶೆರೀಫ್ ಕುಟುಂಬ ಯಾವ ಆಧಾರವೂ ಇಲ್ಲದೆ ಅನಾಥವಾಗಿದೆ. ದುರಂತ ಸಂಭವಿಸಿ ಏಳು ದಿನ ದಾಟಿದರೂ ಸರಕಾರದ ವತಿಯಿಂದ ಯಾವುದೆ ಪರಿಹಾರ ಲಭಿಸಿರುವುದಿಲ್ಲ. ಮಾನವೀಯ ಕಾಳಜಿಯಿಂದ ತಕ್ಷಣವೇ ಸರಕಾರದ ವತಿಯಿಂದ ಪರಿಹಾರ ಧನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.