2023 ಬಜೆಟ್ ಹೈಲೈಟ್ಸ್

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯ  ಮುಂಚಿತವಾಗಿ  ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀಮಿತ ಸಂಪನ್ಮೂಲಗಳನ್ನು ವಿವೇಚನಾಯಕ್ತವಾಗಿ ಬಳಸುವ ಜಾಣ್ಮೆ ಮೆರೆದಿದ್ದಾರೆ.ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸವಾಲುಗಳನ್ನು ಎದುರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಘೋಷಿಸಿದ್ದಾರೆ.

ಬಜೆಟ್ ನಲ್ಲಿ ಏಳು ಆದ್ಯತಾ ವಲಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಹೊಸ ಹಣಕಾಸು ವರ್ಷದಲ್ಲಿ 10 ಲಕ್ಷ ಕೋಟಿ  ಬಂಡವಾಳ ಹೂಡಿಕೆ ಪ್ರಸ್ತಾಪವನ್ನು ಬಜೆಟ್ ಹೊಂದಿದೆ.ಕೃಷಿ ವಲಯದ ಅಭಿವೃದ್ಧಿಗೆ ವಿಶೇಷ  ಆದ್ಯತೆ ನೀಡಲಾಗಿದೆ. ಇದರ ಜತೆಗೆ ಹಸಿರು ಇಂಧನ ಬಳಕೆಗೆ ಪ್ರೋತ್ಸಾಹ ಕ್ರಮಗಳನ್ನು ಘೋಷಿಸಿದ್ದಾರೆ.

ಹಿರಿಯ ನಾಗರಿಕರ ಠೇವಣಿ ಮೊತ್ತವನ್ನು ಹೆಚ್ಚಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಲಾಗಿದೆ. ಎರಡು ಲಕ್ಷ ರೂಪಾಯಿ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದ್ದು, ಶೇಕಡ 7, 5  ಬಡ್ಡಿ ದರ ದೊರೆಯಲಿದೆ. ಆದಿವಾಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಖಾತರಿಪಡಿಸಲು ಏಕ ಲವ್ಯ ಶಾಲೆಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೆ  ಹಸಿರು ನಿಶಾನೆ ನೀಡಲಾಗಿದೆ.ರೈಲು ಇಲಾಖೆಗೆ ದಾಖಲೆ ಅನುದಾನ ಒದಗಿಸಲಾಗಿದೆ.  2.40 ಲಕ್ಷ ಕೋಟಿ ರೂಪಾಯಿ ರೈಲು ಇಲಾಖೆಗೆ ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

Related Posts

Leave a Reply

Your email address will not be published.