ಕೋಲ್ಚಾರಿನಲ್ಲಿ ಕಳಪೆ ಮಟ್ಟದ ರಸ್ತೆ ಕಾಮಗಾರಿ, ಪಾದಯಾತ್ರೆ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರು ಕನ್ನಡಿತೋಡು ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.ಅನುದಾನ ರೂ. 10.5 ಕೋಟಿ ಬಿಡುಗಡೆಗೊಂಡು ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಕೆಲಸ ಮಾಡುತ್ತಿದ್ದಾರೆ.

ರಸ್ತೆಅಗಲೀಕರಣದ ಅರ್ಥ್ ವರ್ಕ್ ಮುಗಿದು ಇದೀಗ ಅಂತಿಮ ಹಂತದ ಡಾಮರೀಕರಣ ಕೆಲಸ ನಡೆಯುತ್ತಿದ್ದು ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಾಗಿದೆ ಎಂದು ಆರೋಪಿಸಿ ಸ್ಥಳೀಯ ಊರಿನ ನಾಗರಿಕರು ಸೇರಿ ಪ್ರತಿಭಟನೆ ಕೈಗೊಂಡು ಪರಿಶೀಲನೆಯ ಪಾದಯಾತ್ರೆ ಮಾಡಿದ ಘಟನೆ ವರದಿಯಾಗಿದೆ.
