Home 2025 January

ಕಾಸರಗೋಡು: ಸಹಾಯದ ನಿರೀಕ್ಷೆಯಲ್ಲಿ ಪ್ರಶಾಂತ್ ರೈ ಕುಟುಂಬ

ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ

ಪುತ್ತೂರು: ಎವಿಜಿ ಅಸೋಸಿಯೇಷನ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಚಿತ್ರೋತ್ಸವ

ಪುತ್ತೂರು: ಎವಿಜಿ ಅಸೋಸಿಯೇಷನ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 19 ಆದಿತ್ಯವಾರದಂದು ತಾಲೂಕು ಮಟ್ಟದ ಚಿತ್ರೋತ್ಸವ ಸ್ಪರ್ಧೆಯು ನಡೆಯಿತು. ಸಮಾರೋಪ ಸಮಾರಂಭದ ಮೊದಲಿಗೆ ಒಂದು ಗಂಟೆಯ ಕಾಲಾವಧಿಯೊಂದಿಗೆ ವಿವಿಧ ಶಾಲೆಗಳಿಂದ ಪಾಲ್ಗೊಂಡಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರ 5 ವಿಭಾಗಗಳ ಚಿತ್ರರಚನಾ ಸ್ಪರ್ಧೆಯು

ಕಡಬ : ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢ ಶಾಲೆಗೆ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ 100 % ಫಲಿತಾಂಶ

ಕಡಬ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ಹೈಯರ್ ಗ್ರೇಡ್ ಮತ್ತು ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅಂಜನಾ ಜೇಮ್ಸ್ 491 ಅಂಕ

ಕಾರ್ಕಳ: ಜ.24ರಂದು ಬೈದೆರ್ಲೆ ನೈಸರ್ಗಿಕ ಗಿಡಮೂಲಿಕಾ ಕೇಂದ್ರ ಶುಭಾರಂಭ

ಕಾರ್ಕಳದ ಅನಂತಶಯನ ರಸ್ತೆಯ ಧರ್ಮಶ್ರೀ ಜೆರಾಕ್ಸ್ ಬಳಿ ಇರುವ ಕಟ್ಟಡದ ಹತ್ತಿರ ಬೈದೆರ್ಲೆ ನೈಸರ್ಗಿಕ ಗಿಡಮೂಲಿಕಾ ಕೇಂದ್ರದ ಶುಭಾರಂಭವು ಜ.24ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಶುಭಕೋರುವಂತೆ ಶ್ರೀಮತಿ ಮತ್ತು ಶ್ರೀ ಸುಧಾಕರ್ ಎಂ. ಪೂಜಾರಿ ಹಾಗೂ ಮಕ್ಕಳು ರೆಂಜಾಳ ಕಾರ್ಕಳ ಅವರು ವಿನಂತಿಸಿಕೊಂಡಿದ್ದಾರೆ.

ಸುಳ್ಯ : ಪ್ರಪ್ರಥಮ ಬಾರಿಗೆ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋ – ಫೆ.16ರಂದು ನಡೆಯಲಿರುವ ಮೊದಲ ಆಡಿಷನ್

ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ ಬಿ ಫೌಂಡೇಶನ್‌ನ ಎಂ.ಬಿ. ಸದಾಶಿವರವರ ಸಹಯೋಗದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ “ಅರೆಭಾಷೆ ಕಾಮಿಡಿ “(ಹಾಸ್ಯ) ಆಡಿಷನ್ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ

ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆ

ಮಂಗಳೂರು ಪ್ರೆಸ್ ಕ್ಲಬ್‌ನ 2024ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಐವರು ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದಾರೆ.ಮುಹಮ್ಮದ್ ಆರೀಫ್ ಪಡುಬಿದಿರೆ (ವಿಜಯ ಕರ್ನಾಟಕ), ಜಿತೇಂದ್ರ ಕುಂದೇಶ್ವರ (ವಿಶ್ವವಾಣಿ), ಭಾಸ್ಕರ ರೈ ಕಟ್ಟ ( ಸುದ್ದಿ ಬಿಡುಗಡೆ) , ರಘರಾಮ ನಾಯಕ್ (ಹೊಸದಿಗಂತ) ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ( ಉದಯವಾಣಿ ) ಇವರು

ಕುಲಶೇಖರ : ಶ್ರೀ ವೀರನಾರಾಯಣ ಮಾತೃ ಮಂಡಳಿಯ ಅಧ್ಯಕ್ಷೆಯಾಗಿ ಪಾರ್ವತಿ ಶೇಖರ್.ಬಿ.ಕೆ ಆಯ್ಕೆ

ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮುಂದಿನ ಅವಧಿಗೆ ದೇವಳದ ಮಾತೃ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಪಾರ್ವತಿ ಶೇಖರ್.ಬಿ.ಕೆ ಶಕ್ತಿನಗರ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷೆಯಾಗಿ ನಾಗವೇಣಿ ಮಾಧವ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಕಿಶೋರ್, ಜತೆ ಕಾರ್ಯದರ್ಶಿಯಾಗಿ ಮಮತಾ ದೇವದಾಸ್, ಕೋಶಾಧಿಕಾರಿಗಳಾಗಿ ಪುಷ್ಪ ಸುಂದರ್ ಹಾಗೂ ಭಾರತಿ.ವಿ, ಜತೆ

ನೇತ್ರಜ್ಯೋತಿ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆ

ಉಡುಪಿಯ ಪ್ರತಿಷ್ಠಿತ   ನೇತ್ರಜ್ಯೋತಿ ಪ್ಯಾರಮೆಡಿಕಲ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ  ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನಾಚರಣೆಯ ಪ್ರಯುಕ್ತ ಅಂತರ್ ಕಾಲೇಜು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉಧ್ಘಾಟಿಸಿದ ಭಾರತೀಯ ರೆಡ್

ಸುರತ್ಕಲ್ : ಕಾಟಿಪಳ್ಳದಲ್ಲಿ ಕೇಶವ ಶಿಶುಮಂದಿರದ ಕಟ್ಟಡ ಉದ್ಘಾಟನೆ

ಸುರತ್ಕಲ್ : ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ದೇಶ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ ಈ ಎರಡೂ ದೃಷ್ಟಿಕೋನವಿದ್ದರೆ ಸನಾತನ ಧರ್ಮ ಮತ್ತು ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಅವರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ, ಹಿಂಧು ಧಾರ್ಮಿಕ ಸೇವಾ ಸಮಿತಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷ ನಾಯಕರ ಭೇಟಿ

ಕರ್ನಾಟಕ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ನಿ ಹಾಗೂ ಮಗಳೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿದ ನಂತರ ಪುರೋಹಿತ ರಮೇಶ್ ಅಸ್ರನ್ನರವರು ದೇವರ ಪ್ರಸಾದ ನೀಡಿ ಶಾಲು ಹಾಕಿ ಗೌರವಿಸಿದರು. ಕ್ಷೇತ್ರದ ದೈವ ಹೊಸಳ್ಳಿಗಮ್ಮನ ದರ್ಶನ ಮಾಡಿದ ನಂತರ