ಬಡಿಲಗುತ್ತು ಡಾ| ಮನೋಹರ್ ನಾರಾಯಣ ಶೆಟ್ಟಿ ನಿಧನ

ಮುಂಬೈ ನಿವಾಸಿ ಬಡಿಲಗುತ್ತು ಡಾ| ಮನೋಹರ್ ನಾರಾಯಣ ಶೆಟ್ಟಿ ಅವರು ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು.
ದಕ್ಷಿಣಕನ್ನಡ ಜಿಲ್ಲೆಯ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಬಡಿಲಗುತ್ತು ಮನೆತನದ ದಿ.ಸೀತಮ್ಮ ಶೆಟ್ಟಿ ಮತ್ತು ದಿ. ಪಾಶಾಣಮೊಗರು ನಾರಾಯಣ ಶೆಟ್ಟಿ ದಂಪತಿಗಳ ಪುತ್ರರಾಗಿರುವ ಇವರು ಹಲವು ವರ್ಷಗಳಿಂದ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಇಬ್ಬರು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.