ಮುಂಬಯಿ: ಕುಲಶೇಖರ, ಮಂಗಳೂರು ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕ್ಷೇತ್ರದ ಸೇವಾಕರ್ತ ಲೋಕೇಶ್ ಬಜಾಲ್ ಸಾರಥ್ಯದಲ್ಲಿ
48 ವಾರಗಳ ಭಜನಾ ಸಂಕೀರ್ತನೆಯ ಅಂಗವಾಗಿ ಭಜನೆ ಮತ್ತು ಕುಣಿತ ಭಜನೆ ಕಾರ್ಯಕ್ರಮವು ಜುಲೈ 22ರಂದು ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರೀ ಕ್ಷೇತ್ರ ರಾಜಾಂಗಣದಳಿಯಲ್ಲಿ ನಡೆಯಲಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನಾ ಸೇವೆ ನಡೆಯಲಿದ್ದು, ಸಂಜೆ 7 ಗಂಟೆಗೆ ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರನಾರಾಯಣ ದೇವರಿಗೆ ರಂಗಪೂಜೆ ನೆರವೇರಲಿದೆ.

ಈ ಪುಣ್ಯ ಕಾರ್ಯದ ಸೇವಾಕರಗಿ ಮುಂಬಯಿಯ ಸಮಾಜ ಸೇವಕಿ, ಮುಂಬೈ ಕುಲಾಲ ಸಂಘದ ಚರ್ಚ್ ಗೇಟ್-ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ರತ್ನಾ ಡಿ. ಕುಲಾಲ್, ಪತ್ರಕರ್ತ ಬಿ. ದಿನೇಶ್ ಕುಲಾಲ್ ಹಾಗೂ ಕಾನೂನು ವಿಧ್ಯಾರ್ಥಿನಿ ಲಾಸ್ಯಾ ಡಿ. ಕುಲಾಲ್, ಸೇವಾಕರ್ತರುಗಳಾಗಿದ್ದು ,
ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವೀರನಾರಾಯಣ ದೇವರ ಕೃಪೆಗೆ ಪಾತ್ರರಾಗುವಂತೆ ದ.ಕ. ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಮತ್ತು ಸರ್ವ ಸದಸ್ಯರು, ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಸುಂದರ್ ಕುಲಾಲ್ ಶಕ್ತಿನಗರ ಮತ್ತು ಸರ್ವ ಸದಸ್ಯರು, ಸೇವಾ ಸಮಿತಿಯ ಅಧ್ಯಕ್ಷರಾದ ಕಿರಣ್ ಅಟ್ಲೂರು, ಮತ್ತು ಸರ್ವ ಸದಸ್ಯರು,, ದೇವಸ್ಥಾನದ ಮಾತೃ ಮಂಡಳಿಯ ಅಧ್ಯಕ್ಷೆ, ಮಮತಾ ದೇವದಾಸ್ ಮತ್ತು ಸರ್ವ ಸದಸ್ಯರು, ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

