70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕಾಂತಾರದ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ
ರಾಹುಲ್ ರಾವೆಲ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು ರಿಷಬ್ ಶೆಟ್ಟಿ ಶ್ರೇಷ್ಠ ನಟ ಮತ್ತು ನಿತ್ಯಾ ಮೆನನ್, ಮಾನಸಿ ಪಾರೇಕ್ ಜಂಟಿಯಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮಲಯಾಳಿ ಚಿತ್ರ ಆಟ್ಟಂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು. ಕಾಂತಾರ ಚಿತ್ರವು ಉತ್ತಮ ಮನೋರಂಜನಾ ಚಿತ್ರ ಎನಿಸಿತು. ಬ್ರಹ್ಮಾಸ್ತ್ರವು ಉತ್ತಮ ವಿಎಫ್‌ಎಕ್ಸ್ ಚಲನಚಿತ್ರ ಪ್ರಶಸ್ತಿಗೆ ಬಾಜನವಾಯಿತು.
ಪ್ರಶಸ್ತಿ ಆಯ್ಕೆಯ ಸಮಿತಿಯಲ್ಲಿ ಸಮಗ್ರ ಅಧ್ಯಕ್ಷತೆ ಹಾಗೂ ಫೀಚರ್ ಫಿಲ್ಮ್ ಪ್ರಶಸ್ತಿ ವಿಭಾಗದ ಅಧ್ಯಕ್ಷತೆ ರಾಹುಲ್ ರಾವೆಲ್, ಫೀಚರ್ ಫಿಲ್ಮೇತರ ವಿಭಾಗದ ಅಧ್ಯಕ್ಷರಾಗಿ ನೀಲಾ ಮದಬ್ ಪಂಡಾ, ಅತ್ಯುತ್ತಮ ಬರಹ ವಿಭಾಗದ ಅಧ್ಯಕ್ಷತೆಯಲ್ಲಿ ಗಂಗಾಧರ ಮೊದಲಿಯಾರ್ ಅವರುಗಳು ಇದ್ದರು.
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ’ಊಂಚಾಯಿ’ ನಿರ್ದೇಶನಕ್ಕಾಗಿ ಸೂರಜ್ ಭರ್ತಾಜ್ಯ ಪಡೆದಿದ್ದಾರೆ. ಇದೇ ಸಿನಿಮಾದ ನಟನೆಗಾಗಿ ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತ ಅತ್ಯುತ್ತಮ ಪೋಷಕ ನಟ ಮತ್ತು ನಟಿ ಪ್ರಶಸ್ತಿ ಪಡೆದರು.
ಅರಿಜಿತ್ ಸಿಂಗ್ ಬ್ರಹ್ಮಾಸ್ತ್ರದ ಹಾಡಿಗಾಗಿ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದರು. ಅದೇ ಚಿತ್ರದ ಸಂಗೀತಕ್ಕಾಗಿ ಪ್ರೀತಮ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಎನಿಸಿದರು.
ಶರ್ಮಿಲಾ ಠಾಗೋರ್ ಅವರ ಗುಲ್‌ಮೊಹರ್ ಚಿತ್ರ ಹಿಂದಿಯ ಉತ್ತಮ ಚಿತ್ರವೆನಿಸಿತು. ಕನ್ನಡ ಉತ್ತಮ ಪ್ರಾದೇಶಿಕ ಚಿತ್ರವಾಗಿ ಕೆಜಿಎಫ್ 2 ಗೆದ್ದಿತು. ತೆಲುಗು ಮತ್ತು ತಮಿಳಿನ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ಕ್ರಮವಾಗಿ ಕಾರ್ತಿಕೇಯ 2 ಮತ್ತು ಪೊನ್ನಿಯನ್ ಸೆಲ್ವನ್ 2 ಪಡೆದವು.