ತುಳುವರ ದೈವಾರಾಧನೆ ಭೂತಾರಾಧನೆಯನ್ನು ಮೊದಲು ದಾಖಲೆ ಮಾಡಿದವರು ಎ. ಸಿ. ಬರ್ನೆಲ್. ಅವರು ಮಂಗಳೂರಿನ ಜಿಲ್ಲಾ ನ್ಯಾಯಮೂರ್ತಿ ಆಗಿದ್ದರು.
ಆದರೆ ಬರ್ನೆಲ್ರ ದಾಖಲೆಗಳಲ್ಲಿ ದೈವಗಳನ್ನು ಪೇಯ್, ಡೆವಿಲ್ ಎಂದು ಕರೆಯಲಾಗಿದೆ. ಆರ್ಥರ್ ಕೋಕ್ ಬರ್ನೆಲ್ರ ಮಾಹಿತಿದಾರ ಒಬ್ಬ ಬ್ರಾಹ್ಮಣ.
ಬರ್ನೆಲ್ರಿಗೆ ಈ ಮಾಹಿತಿ ನುಡಿ ನೀಡಲು ಅವನು ಒಂದೂವರೆ ನೂರಟ್ಟಿಗೂ ಹಿಂದೆ ಮದರಾಸಿನಲ್ಲಿ ಓದಿದ್ದ ಎಂದು ತಿಳಿಯಬಹುದು.

1857ರಲ್ಲಿ ಬ್ರಿಟಿಷರು ಮೊದಲ ಆಧುನಿಕ ವಿಶ್ವವಿದ್ಯಾನಿಲಯಗಳನ್ನು ಕೊಲ್ಕತ್ತಾ, ಬಾಂಬೆ, ಮದರಾಸುಗಳಲ್ಲಿ ಸ್ಥಾಪಿಸಿದರು. ಪೇಯ್ ಎಂದರೆ ದೆವ್ವ, ಅತೀತ ಶಕ್ತಿ ಎಂಬ ಅರ್ಥವಿದೆ. ಈ ಮೂಲ ದ್ರಾವಿಡ ನುಡಿ ಈಗಲೂ ಬಳಕೆಯಲ್ಲಿ ಇರುವುದು ತಮಿಳಿನಲ್ಲಿ ಮಾತ್ರ.
ಮದರಾಸಿನಲ್ಲಿ ಅದಾಗಲೇ ಪೇಯ್ ಎಂದರೆ ಡೆವಿಲ್ ಎಂದು ಅರ್ಥ ನೀಡಲಾಗಿತ್ತು. ಆದ್ದರಿಂದಲೇ ಇಲ್ಲಿ ದೈವಾರಾಧನೆಯನ್ನು ಬಾರ್ಬರಸ್ ಡೆವಿಲ್ಸ್ ವರ್ಶಿಪ್ ಎಂದು ವಿವರಿಸಲಾಗಿದೆ.
ಆಡಳಿತ ಪ್ರಾಂತ್ಯವಲ್ಲದೆ ಮಂಗಳೂರು ಮದರಾಸು ವಿಶ್ವವಿದ್ಯಾನಿಲಯದ ಭಾಗವಾಗಿತ್ತು.

