HomeFresh Newsಪಡುಬಿದ್ರೆ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನಕ್ಕೆ ರೋಹಿಣಿ ಸಿಂದೂರಿ ಭೇಟಿ

ಪಡುಬಿದ್ರೆ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನಕ್ಕೆ ರೋಹಿಣಿ ಸಿಂದೂರಿ ಭೇಟಿ

ಪಡುಬಿದ್ರೆ: ಪಡುಬಿದ್ರಿ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನಕ್ಕೆ ಇಂದು ಕರ್ನಾಟಕ ಸರಕಾರದ ಗಣಿ ಹಾಗೂ ವಾಣಿಜ್ಯ ಕಾರ್ಯದರ್ಶಿ
ರೋಹಿಣಿ ಸಿಂದೂರಿ ಭೇಟಿ ನೀಡಿದರು.

ಭೇಟಿ ನೀಡಿದ ಅವರು ದೇವರ ದರುಶನ ಪಡೆದು ನೂತನವಾಗಿ ಜೀರ್ಣೋದ್ಧಾರಗೊಂಡ ದೇವಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಾಲಯಕ್ಕೆ ಆಗಮಿಸಿದ ರೋಹಿಣಿ ಸಿಂದೂರಿ ಅವರಿಗೆ ದೇವರ ಅನುಗ್ರಹ ಪ್ರಸಾದ ನೀಡಿ, ಜೀರ್ಣೋದ್ಧಾರ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಗ್ರಹ ರಕ್ಷಕದಳದ ಕಮಾಂಡರ್ ರೋಷನ್ ಶೆಟ್ಟಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಜೂತೆ ಕಾರ್ಯದರ್ಶಿ ನವೀನ್ ಚಂದ್ರ ಜೆ ಶೆಟ್ಟಿ, ಮುರಳಿನಾಥ್ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments