HomeFresh News​ಮಂಜೇಶ್ವರ: ರಸ್ತೆಗೆ ಬಿದ್ದ ಬೃಹತ್ ಮರ; ಎಸ್‌ಡಿಪಿಐ ಕಾರ್ಯಕರ್ತರಿಂದ ತೆರವು ಕಾರ್ಯಾಚರಣೆ

​ಮಂಜೇಶ್ವರ: ರಸ್ತೆಗೆ ಬಿದ್ದ ಬೃಹತ್ ಮರ; ಎಸ್‌ಡಿಪಿಐ ಕಾರ್ಯಕರ್ತರಿಂದ ತೆರವು ಕಾರ್ಯಾಚರಣೆ

ಮಂಜೇಶ್ವರ: ಮಂಜೇಶ್ವರದ ಹೊಸಂಗಡಿ-ಆನಪಳ್ಳ ಮಾರ್ಗದ ಕಡಂಬಾರಿನ ಅರಣ್ಯ ಪ್ರದೇಶದಲ್ಲಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ವಿದ್ಯುತ್ ಲೈನ್ ಕಡಿತಗೊಂಡಿದ್ದು, ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿತ್ತು.

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ರೆಸ್ಕ್ಯೂ ಟೀಮ್, ತೀವ್ರ ಪರಿಶ್ರಮದ ಬಳಿಕ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.
​ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ಉಪಾಧ್ಯಕ್ಷ ಸಲಾಮ್ ಮಂಜೇಶ್ವರ, ಸಕರಿಯ ಉದ್ಯಾವರ, ಅಶ್ಫಾಕ್ ಗುಡಕೇರಿ, ರಶೀದ್ ಗಾಂಧಿನಗರ ಮತ್ತು ಅಜೀಜ್ ಅವರು ವಹಿಸಿದ್ದರು
.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments