Homeಕರಾವಳಿಮಂಗಳೂರಿನಲ್ಲಿ ನೂತನ 'ಸ್ಪೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್' ಉದ್ಘಾಟನೆ

ಮಂಗಳೂರಿನಲ್ಲಿ ನೂತನ ‘ಸ್ಪೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್’ ಉದ್ಘಾಟನೆ

ಮಂಗಳೂರಿನ ಆರೋಗ್ಯ ಸೇವಾ ವಲಯದಲ್ಲಿ ಇಂದೊAದು ಹೊಸ ಸೇರ್ಪಡೆ. ನಗರದ ಬಲ್ಲಾಳ್‌ಬಾಗ್‌ನ ಎಂ.ಜಿ. ರೋಡ್‌ನಲ್ಲಿರುವ ಇನ್‌ಲ್ಯಾಂಡ್ ಅವೆನ್ಯೂ ಕಟ್ಟಡದ ನೆಲಮಹಡಿಯಲ್ಲಿ, ನೂತನ ‘ಸ್ಪೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್’ನ ಉದ್ಘಾಟನಾ ಸಮಾರಂಭ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜ್ಯೋತಿ ಜಗದೀಶ್ ನೇತೃತ್ವದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಎ. ಜೆ. ಶೆಟ್ಟಿ ಅವರು ನೆರವೇರಿಸಿ ನೂತನ ಕ್ಲಿನಿಕ್ ಗೆ ಶುಭ ಹಾರೈಸಿದ್ರು. ಇದೇ ವೇಳೆ ಕ್ಲಿನಿಕ್‌ನ ಲೋಗೋ ಅನಾವರಣ ಕಾರ್ಯಕ್ರಮ ನಡೆಯಿತು.


ಅಲ್ಲದೆ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಇನ್‌ಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮದ್ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಲ್ತೂರು ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದ್ರು. ಇದೇ ವೇಳೆ ‘ಸ್ಪೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜ್ಯೋತಿ ಜಗದೀಶ್, ಡಾ. ದರ್ಶನ್, ಮೆಡಿಕಲ್ ಆಫೀಸರ್ ಆಕಾಶ್ ಶೆಟ್ಟಿ, ಸ್ಪೆಶಾಲಿಟಿ ಡಾಕ್ಟರ್ಸ್ ಹಾಗೂ ಕ್ಲಿನಿಕ್ ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments