HomeFresh Newsಕುಂದಾಪುರದಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಡೆರಿಕ್‌ಗಾಗಿ ತೀವ್ರ ಶೋಧ

ಕುಂದಾಪುರದಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಡೆರಿಕ್‌ಗಾಗಿ ತೀವ್ರ ಶೋಧ

ಕುಂದಾಪುರ: ನಗರದ ಹೋಲಿ ರೋಜಾರಿಯೋ ಚರ್ಚ್‌ ಎದುರು ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಈ ಪ್ರಕರಣದ ಆರೋಪಿ ಡೆರಿಕ್‌ ಕ್ರಾಸ್ತಾ ಪತ್ತೆ ಬಗ್ಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಮೂಲತಃ ಹೆಬ್ರಿ, ಪ್ರಸ್ತುತ ಬಾರ್ಕೂರು ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ ಎನ್ನುವರನ್ನು ಹೆಮ್ಮಾಡಿ ಸಮೀಪದ ಕನ್ನಡಕುದ್ರು ನಿವಾಸಿ ಡೆರಿಕ್ ಎಂಬಾತ ಗುಂಡಿಕ್ಕಿ ಹತ್ಯೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದಾನೆ.

‘ದಮ್‌ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ’ ಎಂದು ಡೆರಿಕ್‌ನು ಐವನ್‌ಗೆ ಹೇಳಿ ಲೊಕೇಶನ್ ಕಳಿಸಿದ್ದ. ಅದರಂತೆ ಐವನ್ ಲೊಕೇಶನ್‌ ಆದರಿಸಿ ತನ್ನ ಜೊತೆಗೆ ಏಳುವರ್ಷದಿಂದ ಇದ್ದ ಮಹಿಳೆಯೋರ್ವರ ಜೊತೆ ಕಾರಿನಲ್ಲಿ ಬಂದಿದ್ದು ಕುಂದಾಪುರದ ಚರ್ಚ್‌ ರಸ್ತೆಯ ಹೋಲಿ ರೋಸಾರಿಯ ಚರ್ಚಿನ ಎದುರಿನ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದರು. ಮುಂಜಾನೆ ಸುಮಾರು 3:15ಕ್ಕೆ ಥಾರ್‌ ಕಾರಿನಲ್ಲಿ ಬಂದ ಡೆರಿಕ್‌ನು ಐವನ್‌ ಇದ್ದ ಕಾರಿನ ಎದುರು ನಿಲ್ಲಿಸಿ ಕೆಳಗೆ ಇಳಿದುಬಂದು ಐವನ್‌ರವರು ಕಾರಿನಿಂದ ಇಳಿದಾಗ, ಡೆರಿಕ್‌ನು ಕೈಯಲ್ಲಿ ಹಿಡಿದು ತಂದಿದ್ದ ಒಂದು ಗನ್‌‌ನಿಂದ ಸೊಂಟದ ಕೆಳ ಭಾಗಕ್ಕೆ ಶೂಟ್‌ ಮಾಡಿ ವಾಪಾಸ್ಸು ಕಾರಿನ್ನು ಹತ್ತಿ ಹಿಮ್ಮುಖವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಕ್ತಸ್ರಾವ ಆಗಿ ರಸ್ತೆಯಲ್ಲೆ ಕುಸಿದು ಬಿದ್ದು ತೀವೃ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಈ ಗಲಾಟೆಗೆ ಐವನ್‌ ರವರಿಗೆ ಹಾಗೂ ಡೆರಿಕ್‌ ರವರಿಗೆ ಇದ್ದ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿದ್ದ ಮನಸ್ತಾಪದಿಂದ ಆಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments