ಅಬತರ ಸಿನಿಮಾದ ಬಗ್ಗೆ ಅಪಪ್ರಚಾರ : ಕಮೆಂಟ್ಸ್ ಮಾಡುವ ಬದಲು ಸಿನಿಮಾವನ್ನು ಪ್ರೋತ್ಸಾಹಿಸಿ : ಅರ್ಜುನ್ ಕಾಪಿಕಾಡ್ ಮನವಿ

ತುಳು ಭಾಷೆಯ ಮೇಲೆ ಪ್ರೀತಿ ಇಟ್ಟು ಸಿನಿಮಾ ಮಾಡುತ್ತಿದ್ದೇವೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಬೊಳ್ಳಿ ಮೂವಿಸ್ ಬ್ಯಾನರ್ ಅಡಿಯಲ್ಲಿ ಅಬತರ ಸಿನಿಮಾವನ್ನು ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಕೆಲವೊಬ್ಬರು ಬ್ಯಾಡ್ ಕಮೆಂಟ್‍ಗಳನ್ನು ಹಾಕಿ ಸಿನಿಮಾ ನೋಡದ ಹಾಗೆ ಮಾಡುತ್ತಿರುವುದು ಬೇಸರದ ಸಂಗತಿ ಎಂದು ನಟ ,ನಿರ್ದೇಶಕ ಅರ್ಜುನ್ ಕಾಪಿಕಾಡ್ ಹೇಳಿದರು.ಕಳೆದ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಧೈರ್ಯ ಕುಗ್ಗಿ ಹೋಗಿತ್ತು. ಕೆಲಸ ಇಲ್ಲದೆ ಇದ್ದಾಗ ಅಬತರ ಸಿನಿಮಾ ಮಾಡಲು ನಿರ್ಧರಿಸಲಾಗಿತ್ತು. ಬೊಳ್ಳಿ ಮೂವಿಸ್ ಬ್ಯಾನರ್ ಅಡಿಯಲ್ಲಿ ಅಬತರ ಸಿನಿಮಾ 6ನೇ ಸಿನಿಮಾ ಆಗಿದೆ.
ತುಳು ಭಾಷೆಯ ಮೇಲೆ ಪ್ರೀತಿ ಇಟ್ಟು ಸಿನಿಮಾಕ್ಕೆ ಬಂಡವಾಳ ಹಾಕಿ, ಸಿನಿಮಾ ಮಾಡಿದ್ದೇವೆ.ರಾತ್ರಿ ಹಗಲು ಕಷ್ಟಪಟ್ಟು ಪ್ರಮೋಷನ್ ಮಾಡಿ ಅಬತರ ಸಿನಿಮಾ ತಯಾರಿಸಿದ್ದೇವೆ. ಕಷ್ಟಪಟ್ಟು ಸಿನಿಮಾವನ್ನು ತೆರೆಗೆ ತಂದಿದ್ದೇವೆ. ಅದರೆ ಕಮೆಂಟ್ಸ್ ಮಾಡಲು ಮೊದಲು, ಸಿನಿಮಾಕ್ಕೆ ಪೆÇ್ರೀತ್ಸಾಹಿಸುವ ಕೆಲಸ ಮಾಡಿ ಎಂದು ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡರು.