ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಟಫ್ ರೂಲ್ಸ್

ಎಲ್ಲೆಲ್ಲೋ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಗಳು ಆಗುತ್ತಿದಂತೆ, ಅಮಲು ಪದಾರ್ಥ ಸೇವಿಸುವವರಿಗೆ ಹಾಗೂ ಸಂಘಟಕರಿಗೆ ಪೊಲೀಸ್ ಎಚ್ಚರಿಕೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿ ಕಾರ್ಯಕ್ರಮಕ್ಕೆ ಭಾಗವಹಿಸುವಂತಿಲ್ಲ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ನೀಡಿದ್ದಾರೆ.

PADUBIDRE


ಗಣೇಶೋತ್ಸವ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣೆಯಲ್ಲಿ ಕರೆದ ಸರ್ವದರ್ಮಿಯರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವನ್ನು ಹತ್ತು ಗಂಟೆಯ ಒಳಗೆ ಮುಗಿಸುವಂತೆ ಹಾಗೂ ಪೆಂಡಲ್ ಒಳಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಗಣೇಶ ಮೂರ್ತಿಗೆ ಕಾರ್ಯಕರ್ತರ ಕಣ್ಗಾವಲು, ನಿಗದಿದ ವ್ಯಾಪ್ತಿಯೊಳಗೆ ಧ್ವನಿ ವರ್ಧಕದ ಬಳಕೆ, ಮೆರವಣಿಗೆ ವೇಳೆ ಬಣ್ಣ ಸಹಿತ ಯಾವುದೇ ಲಿಕ್ವಿಡ್ ಎರಚುವುದು ಮಾಡುವಂತ್ತಿಲ್ಲ. ಯಾವುದೇ ಜಾತಿ ಧರ್ಮ ನಿಂದನೆಯ ವೇಷ ಹಾಕುವಂತ್ತಿಲ್ಲ, ಗಣೇಶೋತ್ಸವ ಆಚರಿಸುವ ಸ್ಥಳದ ಮಾಲಿಕರ ಹಾಗೂ ವಿದ್ಯುತ್ ಬಳಕೆಗೆ ಮೆಸ್ಕ ಇಲಾಖೆಯ ಪರವಾನಿಗೆ ಅಗತ್ಯ ಎಂಬಿತ್ಯಾದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಹೆಜಮಾಡಿ ಗ್ರಾಮಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುಧಾಕರ್ ಕರ್ಕೇರ, ಸಮಯ ನಿಗದಿ ಪಾಲನೆಯಲ್ಲಿ ಕೊಂಚ ಏರುಏರಾದರೂ ನಮ್ಮೊಂದಿಗೆ ಪೊಲೀಸ್ ಇಲಾಖೆ ಸಹಕರಿಸುವಂತೆ ವಿನಂತಿಸಿದ್ದಾರೆ. ವೇದಿಕೆಯಲ್ಲಿ ಪಡುಬಿದ್ರಿ ಎಸ್ಸೈ ಪುರುಷೋತ್ತಮ್, ಕ್ರೈಂ ಎಸ್ಸೈ ಪ್ರಕಾಶ್ ಸಹಿತ
ಸಭೆಯಲ್ಲಿ ಪ್ರಮುಖವಾಗಿ ಸ್ಥಳೀಯ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಬೀರ್ ಸಹೇಬ್, ಗುಣಾಕರ್ ಶೆಟ್ಟಿ, ಸತೀಶ್ ಸಾಲ್ಯಾನ್, ಅಜಿತ್ ಶೆಟ್ಟಿ, ಸುಜೀತ್ ಶೆಟ್ಟಿ, ಶ್ರೀನಿವಾಸ್ ಹೆಜಮಾಡಿ ಮುಂತಾದ ಪ್ರಮುಖರಿದ್ದರು.

Related Posts

Leave a Reply

Your email address will not be published.