ಅಬತರ ತುಳು ಸಿನಿಮಾ : ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ

ಯಂಗ್ ಫ್ರೆಂಡ್ಸ್ ಕೊಟ್ಟಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಣ್ಣಗುಡ್ಡ ಇವರ ಸಹಕಾರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಅಬತರ ತುಳು ಸಿನಿಮಾ ತಂಡ ಭಾಗವಹಿಸಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು. ಅಬತರ ಚಿತ್ರದ ನಟ ಅರ್ಜುನ್ ಕಾಪಿಕಾಡ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಅಬತರ ಸಿನಿಮಾ ತಂಡದ ನಟ ನಟಿಯರು ಹಾಗೂ ಯಂಗ್ ಫ್ರೆಂಡ್ಸ್ ಕೊಟ್ಟಾರದ ಸದಸ್ಯರು ಮತ್ತು ಮಣ್ಣಗುಡ್ಡ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
