ಹೆಜಮಾಡಿ ಕರಾವಳಿ ಕಾವಲು ಠಾಣೆ : ಸ್ವಾತಂತ್ರೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ವಿತರಣೆ

ಹೆಜಮಾಡಿ ಕೋಡಿಯಲ್ಲಿ ಕಾರ್ಯಚರಿಸುತ್ತಿರುವ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಘಟಕದ ಮಾನ್ಯ ಎಸ್ಪಿ ಅಬ್ದುಲ್ ಅಹದ್ ಐಪಿಎಸ್ ರವರ ನಿರ್ದೇಶನದಂತೆ 75ನೇ ಸ್ವಾತಂತ್ರ್ಯ ದಿನ ಆಚರಣೆಯ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಅಭಿನಂದಿಸಲಾಯಿತು.
ಹೆಜಮಾಡಿ ಕರಾವಳಿ ಕಾವಲು ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಮಂಜಪ್ಪ ಡಿ. ಆರ್, ಧ್ವಜಾರೋಹಣ ನಡೆಸಿ ಮಾತನಾಡಿ, ನಮ್ಮ ಕರಾವಳಿ ಕಾವಲು ಪೊಲೀಸ್ ಠಾಣಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ, ಎಸ್ಪಿಯವರ ನಿರ್ಧೇಶನದಂತೆ ಅವರ ಕಛೇರಿಯಿಂದ ನೀಡಲ್ಪಟ್ಟ ಪ್ರಶಂಸನಾ ಪತ್ರ ಸಹಿತ ವಿದ್ಯಾಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಗೌರವಿಸಲಾಯಿತು, ಈ ಕಾರ್ಯಕ್ರಮ ಕರಾವಳಿ ಉದ್ದಕ್ಕೂ ಎಲ್ಲಾ ಠಾಣೆಗಳಲ್ಲಿ ಆ ಭಾಗದ ಶಿಕ್ಷಣ ಕ್ಷೇತ್ರದ ಸಾಧಕರನ್ನು ಗುರುತಿಸಿ ನಡೆಸಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಠಾಣಾ ಎಸೈ ರಾಜೇಂದ್ರ ಕುಮಾರ್ ಸಹಿತ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

