ಆಭರಣ ಮಳಿಗೆ ವತಿಯಿಂದ ನಮ್ಮಮ್ಮ ಶಾರದೆ ಸ್ಪರ್ಧೆ

ಮಂಗಳೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಆಭರಣ ಮಳಿಗೆಯ ವತಿಯಿಂದ ನಮ್ಮಮ್ಮ ಶಾರದೆ ಸ್ಪರ್ಧೆ ಮತ್ತು ಕಲಾ ನಿಕೇತನ ಮಂಗಳೂರು ಇದರ ನಿರ್ದೇಶಕಿ ಶ್ರೀಮತಿ ಸಾವಿತ್ರಿ ರಾಮರಾವ್ ಹಾಗೂ ವಿದ್ಯಾರ್ಥಿಗಳಿಂದ ವೀಣಾ ಸಂಧ್ಯಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ರೋಟರಿ ಬಾಲಭವನದಲ್ಲಿ ನಮ್ಮಮ್ಮ ಶಾರದೆ ಸ್ಪರ್ಧೆಯನ್ನು ಹಮ್ಮಿಕೊಂಡರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ವೀಣೆ ಹಿಡಿದು ಶಾರದೆಯ ಅವತಾರದಲ್ಲಿ ಮಿಂಚಿದ್ದು ಎಲ್ಲರ ಗಮನ ಸೆಳೆಯಿತು. ಪ್ರತಿಯೊಬ್ಬ ಪುಟಾಣಿಗಳು ಸಹ ಶಾರದೆಯ ರೂಪದಲ್ಲಿ ರಮಣೀಯವಾಗಿ ಕಾಣಿಸುತ್ತಿದ್ದರು. ಇನ್ನು ಕಾರ್ಯಕ್ರಮದಲ್ಲಿ ಆಭರಣ ಸಂಸ್ಥೆಯ ಸಂಧ್ಯಾ ಸುಭಾಷ್ ಕಾಮತ್ ಮತ್ತು ವೀಣಾ ಸುಭಾಷ್ ಕಾಮತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ 29ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮೈತ್ರಿ ಮಲ್ಲಿ ಮತ್ತು ರಿಯಾ ಬಾಳಿಗ ಅವರು ತೀರ್ಪುಗಾರರಾಗಿ ಸಹಕರಿಸಿದರು.ಕಾರ್ಯಕ್ರಮದಲ್ಲಿ ಮಂಗಳೂರಿನ ಕಲಾ ನಿಕೇತನ ಮಂಗಳೂರು ಇದರ ನಿರ್ದೇಶಕಿ ಶ್ರೀಮತಿ ಸಾವಿತ್ರಿ ರಾಮರಾವ್ ಹಾಗೂ ವಿದ್ಯಾರ್ಥಿಗಳಿಂದ ವೀಣಾ ಸಂಧ್ಯಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಮಿತಾ ಶೈಣೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.