ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ : ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರಿಗೆ ಸಂಘಪರಿವಾರಗಳ ಬೆದರಿಕೆ ಇರುವ ಕಾರಣ ಅವರಿಗೆ ರಕ್ಷಣೆಗೆ ಆಗ್ರಹಿಸಿ ಹಾಗೂ ಸಂಘಪರಿವಾರದ ಹಿಂದುತ್ವವಾದಿಗಳು ಜಾತ್ಯಾತೀತವಾದ ಹಿಂದು ಧರ್ಮದ ಮಾನ ತೆಗೆಯವುದರ ವಿರುದ್ದ, ಹಿಂದುಗಳ ದೇವರ ಸ್ಮರಣೆಯ ಭಾಗವಾದ ಭಜನೆಯನ್ನು ಗೇಲಿ ಮಾಡುವಂತೆ ಪೋಲೀಸ್ಟೇಶನ್ ಎದುರು ಭಜನೆ ನಡೆಸಿ ಹಿಂದುಗಳಿಗೆ ಅವಮಾನಿಸಿದ ಸಂಘಪರಿವಾರದ ವಿರುದ್ದ ಹಾಗೂ ಹಿಂದುಳಿದ , ದಲಿತ ವರ್ಗದವರ ಧ್ವನಿ ಅಡಗಿಸುವ ಕುತಂತ್ರ ನಡೆಸುವ ಹಿಂದುತ್ವವಾದಿಗಳಿಂದ ಹಿಂದು ಧರ್ಮವನ್ನು ರಕ್ಷಣೆ ಮಾಡಬೇಕು ಆ ಮೂಲಕ ದುಡಿಯುವ ಜನರ ಹಿತಾಸಕ್ತಿಗೆ ರಕ್ಷಣೆ ನೀಡಲು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ದಲಿತ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
