ಮಂಗಳೂರು: ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ 14ನೇ ವಾರ್ಷಿಕ ಸ್ಪೆಕ್ಟ್ರಮ್ ಹೃದಯಶಾಸ್ತ್ರ ಸಮ್ಮೇಳನ
ಮಂಗಳೂರಿನ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸ್ಪೆಕ್ಟ್ರಮ್ – 2025″ ಎಂಬ ಒಂದು ದಿನದ ಹೃದಯ ಶಾಸ್ತ್ರ ಸಮ್ಮೇಳನವು ಜನವರಿ 11, 2025 ರಂದು ಮಂಗಳೂರಿನ “ದಿ ಓಷನ್ ಪರ್ಲ್ ಹೊಟೇಲ್‌ನಲ್ಲಿ ನಡೆಯಲಿದೆ. 2012ರಿಂದ ಆರಂಭವಾದ ಈ ಸಮ್ಮೇಳನದ ಇದು ೧೪ನೇ ಆವೃತ್ತಿಯಾಗಿದೆ. ಕರ್ನಾಟಕ ಮತ್ತು ಸುತ್ತಮುತ್ತಲಿನ ರಾಜ್ಯಗಳಿಂದ ೨೫೦ಕ್ಕೂ ಹೆಚ್ಚು ಹೃದಯರೋಗ ತಜ್ಞರು ಭಾಗವಹಿಸಲಿದ್ದಾರೆ. ದೇಶದ ಪ್ರಮುಖ ವೈದ್ಯರು ಉಪನ್ಯಾಸ ನೀಡಲಿದ್ದು, ಹೃದಯಶಾಸ್ತ್ರದ ವಿವಿಧ ಅಂಶಗಳ ಕುರಿತು ಚರ್ಚೆಗಳು ಮತ್ತು ಸಂವಾದಗಳು ನಡೆಯಲಿವೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಹೃದಯ ರೋಗತಜ್ಞರು ಹಾಗೂಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಬಿ.ವಿ. ಮಂಜುನಾಥ್ ತಿಳಿಸಿದ್ದಾರೆ.