ಕಡಬ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಬೆಂಕಿಗಾಹುತಿ
![](https://v4news.com/wp-content/uploads/2025/01/WhatsApp-Image-2025-01-08-at-22.03.38-1-1140x620.jpeg)
ಕಡಬ : ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಮನೆಯ ಅಮೂಲ್ಯ ವಸ್ತುಗಳು ಸುಟ್ಟು ಹೋದ ಘಟನೆ ಆಲಂಕಾರಿನಲ್ಲಿ ನಡೆದಿದೆ.
![](https://v4news.com/wp-content/uploads/2025/01/WhatsApp-Image-2025-01-08-at-22.03.36-2-1024x768.jpeg)
ಆಲಂಕಾರು ಗ್ರಾಮದ ನೆಕ್ಕಿಲಾಡಿ ವಿನೋದಾ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಮನೆ ಒಳಗಡೆಯಿದ್ದ ವಿದ್ಯುತ್ ಉಪಕರಣಗಳು, ಬಟ್ಟೆ ಸೇರಿದಂತೆ ಚಿನ್ನದ ಒಡವೆಗಳು ಬೆಂಕಿಗೆ ಆಹುತಿಯಾಗಿದೆ.
![](https://v4news.com/wp-content/uploads/2025/01/WhatsApp-Image-2025-01-08-at-22.03.37-1024x768.jpeg)
ಪತಿ ಮೃತಪಟ್ಟ ಬಳಿಕ ವಿನೋದಾ ಇಬ್ಬರು ಮಕ್ಕಳೊಂದಿಗೆ ಚಿಕ್ಕದೊಂದು ಹಂಚಿನ ಮನೆಯಲ್ಲಿ ವಾಸಿಸುತಿದ್ದರು. ಮಕ್ಕಳು ತಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ತೆರಳಿದ್ದರು. ವಿನೋದಾ ಅವರು ಸಂಜೆ ತನಕ ಕೂಲಿ ಕೆಲಸ ಮಾಡಿ ರಾತ್ರಿ ಮಕ್ಕಳ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಿದ್ದರು. ಸುಮಾರು ರಾತ್ರಿ 8ರ ವೇಳೆಗೆ ಈ ಅವಘಡ ಸಂಭವಿಸಿದ್ದು ಸ್ಥಳೀಯರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮನೆ ಕಡೆ ತೆರಳಿ ಪರಿಶೀಲಿಸಿದಾಗ ಬೆಂಕಿ ಮನೆಯೊಳಗೆ ಆವರಿಸಿರುವುದನ್ನು ಗಮನಿಸಿದ್ದರು. ತಕ್ಷಣ ಮನೆಯೊಡತಿಗೆ ವಿಚಾರ ತಿಳಿಸಿ ಮನೆ ಬಾಗಿಲು ಮುರಿದು ನೀರು ಹಾಕಿದ್ದರು. ಆ ವೇಳೆಗಾಗಲೆ ಮನೆಯ ಸೋಫಾ, ಬಟ್ಟೆ ಬರೆಗಳು ಬೆಂಕಿಗೆ ಆಹುತಿಯಾಗಿತ್ತು. ತಾವು ಹಾಕಿಕೊಂಡಿರುವ ಬಟ್ಟೆ ಮತ್ತು ತೊಳೆದು ಹೊರಗಡೆ ಒಣಗಳು ಹಾಕಿದ್ದ ಬಟ್ಟೆ ಮಾತ್ರ ಉಳಿದಿದ್ದು ಮಕ್ಕಳ ಪುಸ್ತಕಗಳು ಬೆಂಕಿಕೆಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪಂಚಾಯತಿ ಆಡಳಿಯ ಮಂಡಳಿ, ಅಧಿಕಾರಿಗಳು, ತೆರಳಿ ಪರಿಶೀಲನೆ ನಡೆಸಿದ್ದಾರೆ.
![add - BDG](https://v4news.com/wp-content/uploads/2024/07/BDG-add-1024x1024.jpeg)