ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾನೆ ವೈದ್ಯ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ ಅಮಾನವೀಯ ಘಟನೆ ನೆಡೆದಿದೆ.ಇದಕ್ಕೆ ಹಲವು ಭಾರಿ ಇಂತಹ ಘಟನೆ ಪ್ರತ್ಯಕ್ಷವಾದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದೇ ಪ್ರಮುಖ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ರಸ್ತೆತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಪೆÇೀಲಿಸ್ ಮಧ್ಯಸ್ಥಿಕೆಯಿಂದ ಸಮಾಧಾನಗೊಳಿಸಿದರು ಗ್ರಾಮಸ್ಥರು ಆಸ್ಪತ್ರೆಗೆ ಡಿ.ಹೆಚ್.ಓ ಬರಬೇಕೆಂದು ಒತ್ತಾಯಿಸಿದರು.
ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.ಜಿಲ್ಲಾ ಆರ್.ಸಿ.ಹೆಚ್ ಆದಿಕಾರಿ ಹಾಗೂ ತಾಲ್ಲೂಕು ಆರೋಗ್ಯಧಿಕಾರಿ ಬೇಟಿ ನೀಡಿ ಪರಿಶೀಲಿಸಿ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿ ಸಿಬ್ಬಂದಿಗಳಾದ ರಮ್ಯ ಮತ್ತು ವಿದ್ಯರನ್ನು ಅಮಾನತುಗೊಳಿಸಿದ್ದೇವೆ. ಇನ್ನೂ ಮುಂದೆ ಇಂತಹ ಘಟನೆ ನೆಡಯದ ಹಾಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಹೆಚ್.ಓ ತಿಳಿಸಿದರು.ಈ ಸಂದರ್ಭದಲ್ಲಿ ಸಿಂಗಟಗೆರೆ ಗ್ರಾಮಸ್ಥರು,ಸ್ಥಳೀಯ ದಲಿತ ಸಂಘಟನೆಯ ಮುಂಖಡರಿದ್ದರು.
