ಭಜರಂಗ ದಳದ ನಿಷೇದಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಸರ್ವನಾಶ ಖಂಡಿತ : ಅರುಣ್ ಕುಮಾರ್ ಪುತ್ತಿಲ

ಭಜರಂಗದಳ ನಿಷೇಧ ಬಿಡಿ, ಯಾವ ಒಬ್ಬ ಕಾರ್ಯಕರ್ತನಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ.ಪುತ್ತೂರು : ಚುನಾವಣೆಯ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ರಣಾಳಿಕೆ ಕೆಲವು ವಿಚಾರವು ಕಿಚ್ಚು ಹಚ್ಚಿದೆ.ಈ ಬಗ್ಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಪ್ರತಿಕ್ರಿಯಿಸಿದ್ದು, `ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳದ ನಿಷೇಧದ ಉಲ್ಲೇಖ ನನ್ನ ಗಮನಕ್ಕೆ ಬಂದಿದೆ.., ಹಿಂದೂ ಸಮಾಜದ ಮೇಲೆ ಕಾಂಗ್ರೆಸ್ ನ ಇಂತಹ ಷಡ್ಯಂತ್ರಗಳು ನಡೆಯಲು ಬಿಡುವುದಿಲ್ಲ. ಧರ್ಮ ವಿರೋಧದ ಯೋಚನೆಯನ್ನು ನಾವು ವಿರೋಧಿಸಬೇಕಾಗಿದೆ. ಇಂತಹ ಯೋಚನೆಗಳಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದಿದ್ದಾರೆ.ಭಜರಂಗದಳವನ್ನು ನಿಷೇಧ ಮಾಡಬೇಕು ಎಂಬ ಯೋಚನೆಯಡಿಯಲ್ಲಿ ಪ್ರಣಾಳಿಕೆ ಸೇರಿಸುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದನ್ನು ನಾವು ಖಂಡಿಸುತ್ತೇವೆ.

Related Posts

Leave a Reply

Your email address will not be published.