ಬಜರಂಗದಳ ನಿಷೇಧ ಪ್ರಸ್ತಾವ : ಹಿಂದೂಗಳಿಗೆ ಮಾಡಿದ ಅವಮಾನ : ವಿ.ಎಚ್.ಪಿ

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪಿಸಿದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸಿದೆ. ಬಜರಂಗದಳ ರಾಷ್ಟ್ರಭಕ್ತ ಸಂಘಟನೆ ದೇಶದಾದ್ಯಂತ 60 ಸಾವಿರ ಗ್ರಾಮಗಳಲ್ಲಿ ಬಜರಂಗದಳದ ಕಾರ್ಯ ನಡೆಯುತ್ತಿದೆ. ಶ್ರೀರಾಮ ಮಂದಿರ ಹೋರಾಟದಿಂದ ಪ್ರಾರಂಭಗೊಂಡು ಹಿಂದು ಶ್ರದ್ದಾ ಬಿಂದುಗಳ ರಕ್ಷಣೆ, ಗೋರಕ್ಷಣೆ, ಲವಜಿಹಾದ್‌ಗೆ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆ,ಸಾವಿರಾರು ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡಲು ಹೊರಟಿರುವುದು ಮಾತ್ರವಲ್ಲದೇ ದೇಶದ್ರೋಹಿ ಸಂಘಟನೆಯಾದ ಪಿ.ಎಫ್.ಐ ನೊಂದಿಗೆ ಹೋಲಿಕೆ ಮಾಡಿರುವುದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.

ಇನ್ನು ಚುನಾವಣೆಗೆ ಕೇವಲ 8 ದಿವಸಗಳಿದ್ದು ಗ್ರಾಮ, ಹಳ್ಳಿ, ನಗರಗಳ ಮನೆಮನೆಗೆ ಬಜರಂಗದಳದ ಕಾರ್ಯಕರ್ತರು ಹೋಗಿ ಹಿಂದೂಗಳಿಗೆ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಅರಿವು ಮೂಡಿಸಿ ಕಾಂಗ್ರೆಸ್‌ಗೆ ಮತ ಹಾಕದಂತೆ ಮನವಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಈ ಸರಕಾರ ಬರದಂತೆ ಸಂಪೂರ್ಣ ಪ್ರಯತ್ನವನ್ನು ಮಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Related Posts

Leave a Reply

Your email address will not be published.