ಮಂಗಳೂರು : ಚೀನಾದ ಹಾರ್ಬಿನ್‌ನಲ್ಲಿ ನಡೆಯಲಿರುವ ಏಷ್ಯಾನ್ ವಿಂಟರ್ ಗೇಮ್ಸ್-2025: ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾದ ಡೇನಿಯಲ್, ಡ್ಯಾಶಿಯಲ್

ಚೀನಾದ ಹಾರ್ಬಿನ್‌ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಏಷ್ಯನ್ ವಿಂಟರ್ ಗೇಮ್ಸ್ 2025ಕ್ಕೆ ಮಂಗಳೂರಿನ ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಟೀಮ್ ಇಂಡಿಯಾ-ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ಜಿಲ್ಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವವರು ಅನೇಕರಿದ್ದಾರೆ. ಅದೇ ಸಾಲಿಗೆ ಮಂಗಳೂರಿನ ಸಹೋದರ ಮತ್ತು ಸಹೋದರಿಯಾದ ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಸೇರಿದ್ದಾರೆ. ಇದೀಗ ಇಂಡಿಯಾ ಟೀಮ್‌ನಿಂದ ಐಸ್ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ. ಫೆಬ್ರವರಿ ೭ರಿಂದ ೧೪ರ ರವರೆಗೆ ಚೀನಾದ ಹಾರ್ಬಿನ್‌ನಲ್ಲಿ ನಡೆಯಲಿರುವ ಏಷ್ಯನ್ ವಿಂಟರ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.

ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಐಸ್ ಸ್ಕೇಟಿಂಗ್‌ಗೆ ತರಬೇತಿಯನ್ನು ಇಂಡಿಯನ್ ಕೋಚ್ ಆಗಿರುವ ಶ್ರೀಕಾಂತ್ ರಾವ್ ಅವರ ಜೊತೆ ಪಡೆದುಕೊಳ್ಳುತ್ತಿದ್ದು, ರೋಲರ್ ಸ್ಕೇಟಿಂಗ್‌ಗೆ ಮೋಹನ್ ದಾಸ್ ಅವರಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಡೇನಿಯಲ್, ಡ್ಯಾಶಿಯಲ್ ಅವರು ಮಂಗಳೂರಿನ ದೇರೆಬೈಲ್‌ನ ನಿವಾಸಿಯಾಗಿದ್ದು, ಫ್ರಾನ್ಸಿಸ್ ಕಾನ್ಸೆಸಾವೊ ಮತ್ತು ಡೋರೆಸ್ ಕಾನ್ಸೆಸಾವು ದಂಪತಿಯ ಮಕ್ಕಳಾಗಿದ್ದಾರೆ.
ಕಠಿಣ ಪರಿಶ್ರಮದಿಂದ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಲು ಹೊರಟಿದ್ದು, ಇಬ್ಬರೂ ಕೂಡ ಉತ್ಸಾಹ ಭರಿತ ಕ್ರೀಡಾಪಟುಗಳು ಆಗಿದ್ದಾರೆ. ಈಗಾಗಲೇ ಇವರು ತರಬೇತಿಯನ್ನು ಪಡೆದುಕೊಂಡಿದ್ದು, ದಾಖಲೆ ನಿರ್ಮಿಸಲು ಹೊರಟಿದ್ದಾರೆ.