ಬೈಂದೂರು : ಅಪರಿಚಿತರು ಬಿಟ್ಟು ಹೋದ ಕರುಗಳು ಸಾವು

ಹೈಬ್ರಿಡ್ ಜಾನುವಾರುಗಳ ಹುಟ್ಟಿದ 3-4ದಿನಗಳ ಸುಮಾರು 10-12 ಗೋವಿನ ಗಂಡು ಕರುಗಳನ್ನು ಯರುಕೋಣೆ ಸಮೀಪದ ಆಲಗೆದ್ದಕೇರಿಯ ಕಲ್ಲುಕ್ವಾರಿ ಮಧ್ಯೆ ಬಿಟ್ಟು ಹೋದ ಘಟನೆ ನಡೆದಿದೆ. 2 ಕರುಗಳು ನೀರು ಆಹಾರ ಇಲ್ಲದೆ ಸತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದ್ದರು.ನಂತರ ಬೈಂದೂರು ಪಶುವೈದ್ಯಾಧಿಕಾರಿ ನಾಗರಾಜ್ ಅವರು ಕರುಗಳಿಗೆ ಚಿಕಿತ್ಸೆಯನ್ನು ನೀಡಿದ್ದಾರೆ.

ಸ್ಥಳೀಯ ನಿವಾಸಿ ಶಿಕ್ಷಕ ಜಯಪ್ರಕಾಶ ಶೆಟ್ಟಿ ಮಾತನಾಡಿ, ನಾನು ಶಾಲೆಯಿಂದ ಮನೆಗೆ ಬರುವ ಸಮಯದಲ್ಲಿ ಕರುಗಳ ಕೂಗಾಟ ಕೇಳಿಸಿದ್ದು ಕಲ್ಲುಕ್ವಾರಿಗಳ ಒಳಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಿದರು. ನಾಗೇಶ್ ಯರುಕೋಣೆ ಅವರು ಮನೆಯಲ್ಲಿ ಕರುಗಳನ್ನು ತಾತ್ಕಾಲಿಕ ಉಳುವಿಗೆ ವ್ಯವಸ್ಥೆ ಮಾಡಲಾಗಿದೆ. ಜನಪ್ರತಿನಿಧಿಗಳು ಕರುಗಳನ್ನು ಗೋಶಾಲೆಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಕರುಗಳು ರಕ್ಷಣೆಗೆ ಶಿಕ್ಷಕ ಜಯಪ್ರಕಾಶ ಶೆಟ್ಟಿ, ಸುಧಾಕರ ಪೂಜಾರಿ, ನಾಗೇಶ್, ರಕ್ಷಿತ್, ಮಂಜುನಾಥ ಸಹಾಯ ಮಾಡಿದ್ದಾರೆ.
