HomeFresh Newsಬೈಂದೂರಿನ ನಾವುಂದಲ್ಲಿ ಅಪಘಾತದಲ್ಲಿ ಮೂವರಿಗೆ ಗಾಯ ಒರ್ವನ ಸ್ಥಿತಿ ಗಂಭೀರ

ಬೈಂದೂರಿನ ನಾವುಂದಲ್ಲಿ ಅಪಘಾತದಲ್ಲಿ ಮೂವರಿಗೆ ಗಾಯ ಒರ್ವನ ಸ್ಥಿತಿ ಗಂಭೀರ

ಬೈಂದೂರು: ಬೈಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಬಸ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು.

ಕಾರು ಕುಂದಾಪುರದಿಂದ ಭಟ್ಕಳ ಕಡೆಗೆ ಸಾಗುತ್ತಿತ್ತು. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿ.ಎಸ್.ಐ ಪವನ್ ನಾಯಕ್ ಭೇಟಿ ನೀಡಿದ್ದು, ಪ್ರಕರಣದ ಕೇಸು ದಾಖಲಿಸಲಾಗಿದೆ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments