ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. : ನೂತನ ಕೊಡಾಜೆ ಶಾಖೆ ಉದ್ಘಾಟನೆ

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ 10 ನೇ ಕೊಡಾಜೆ ಶಾಖೆಯು ನೇರಳಕಟ್ಟೆ ಬಳಿಯ ಕೊಡಾಜೆಯ ನಿಧಾ ಆರ್ಕೆಡ್ ನಲ್ಲಿ ಶುಭಾರಂಭಗೊಂಡಿತು. ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಶಾಖೆಯನ್ನು ಉದ್ಘಾಟಿಸಿ ದೀಪ ಪ್ರಜ್ವಲಿಸಿದರು.
ಪುತ್ತೂರು ನಗರ ಸಭೆ ಅಧ್ಯಕ್ಷ ಜೀವಂದರ್ ಜೈನ್ ಭದ್ರತಾ ಕೊಠಡಿ ಉದ್ಘಾಟಿಸಿದರು. ನೆಟ್ಲಮುಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ ಕಂಪ್ಯೂಟರ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸಭಾಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ ಅನೇಕರಿಗೆ ಉದ್ಯೋಗವಕಾಶದೊಂದಿಗೆ ಆರ್ಥಿಕ ಸೇವೆ ನೀಡುವ ಉದ್ದೇಶದೊಂದಿಗೆ ಸಂಘವನ್ನು ಸ್ಥಾಪಿಸಲಾಗಿದ್ದು ಯಶಸ್ವಿ 20 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ 10 ಶಾಖೆಗಳನ್ನು ತೆರೆದು ಜಿಲ್ಲಾಮಟ್ಟದಲ್ಲೂ ಶಾಖೆಗಳನ್ನು ವಿಸ್ತಾರಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಪ್ರಸ್ತುತ ಸಂಘ 78 ಲಕ್ಷ ನಿವ್ವಳ ಲಾಭಗಳಿಸಿದ್ದು 1 ಕೋಟಿ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ನೂತನ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘವು ಸುಬಾಶ್ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಅತ್ಯಂತ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರಿ ಸಂಘಗಳ ಶಾಖೆಗಳು ಹೆಚ್ಚು ಹೆಚ್ಚು ಶಾಖೆಗಳನ್ನು ತೆರೆಯುವುದು ಪೈಪೆÇೀಟಿಗಾಗಿ ಅಲ್ಲ, ಬದಲಿಗೆ ಜನರಿಗೆ ಉತ್ತಮ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಸಹಕಾರ ಸಂಘಗಳು ಆರಂಭಗೊಳ್ಳುವುದು ಅಭಿನಂದನೀಯ, ಅನೇಕರಿಗೆ ಉದ್ಯೋಗ ನೀಡುವ ಕಾರ್ಯ ಸಹಕಾರಿ ಸಂಸ್ಥೆಗಳಿಂದ ಆಗುತ್ತಿದೆ ಎಂದ ಅವರು ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ 50 ಕೋಟಿ ವ್ಯವಹಾರ ನಡೆಸಿರುವುದು ದೊಡ್ಡ ಸಾಧನೆ ಎಂದರು. ಭದ್ರತಾ ಕೊಠಡಿ ಉದ್ಘಾಟಿಸಿದ ಪುತ್ತೂರು ನಗರ ಸಭೆ ಅಧ್ಯಕ್ಷ ಜೀವಂದರ್ ಜೈನ್ ಮಾತನಾಡಿ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ವ್ಯವಹಾರ ನಡೆಸಲು ಜನ ಸಮಾನ್ಯರು ಕಷ್ಟಪಡುತ್ತಿರುವಾಗ ಅದಕ್ಕೆ ಪೂರಕವಾಗಿ ಸಹÀಕಾರಿ ಸಂಘಗಳು ಆರ್ಥಿಕ ಸೇವೆಯನ್ನು ನೀಡುತ್ತಿದೆ ಎಂದರು. ಸೂರಿಕುಮೇರು ಜೋಸೆಫ್ ಚರ್ಚ್‍ನ ಧರ್ಮಗುರು ರೆ|ಫಾ| (ರೆವರೆಂಡ್ ಫಾಧರ್) ಗ್ರೆಗರಿ ಪಿರೇರಾ ಶುಭಾಶಂಸನೆಗೈದು ಪ್ರೀತಿ ವಿಶ್ವಾಸಗಳಿದ್ದಾಗ ಎಲ್ಲಾ ಕ್ಷೇತ್ರಗಳ್ಲೂ ಅಭಿವೃದ್ದಿ ಕಾಣಲು ಸಾಧ್ಯವಿದೆ. ಅಂತಹ ಪ್ರೀತಿ ವಿಶ್ವಾಸದ ಸೇವೆ ವರ್ತಕರ ಸಹಕಾರಿ ಸಂಘದಲ್ಲೂ ಎದ್ದುಕಾಣುತ್ತಿದೆ ಎಂದರು. ನೆಟ್ಲ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು.

ಧವಳ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಸುದರ್ಶನ ಜೈನ್ ಪಿಗ್ಮಿ ಯಂತ್ರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ನೂತನ ಶಾಖೆ ಆರಂಭಕ್ಕೆ ಸಹಕರಿಸಿದ ರಾಜ್ ಕಮಲ್ ಹೆಗ್ಡೆ ಮತ್ತು ಹೊನ್ನಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮಾಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಕೃಷ್ಣ ಆಳ್ವ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಟ್ಟಡ ಮಾಲೀಕ ಹಮೀದ್ , ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಜೋಡುಮಾರ್ಗ ಇದರ ಅಧ್ಯಕ್ಷ ಜಯಾನಂದ ಪೆರಾಜೆ, ನೆಟ್ಲ ಮುಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ ಉಪಾಧ್ಯಕ್ಷ ತನಿಯಪ್ಪ ಗೌಡ, ಉದ್ಯಮಿ ಜಗನ್ನಾಥ ಚೌಟ, ಕೊಡಾಜೆ ಬ್ರಹ್ಮಶ್ರೀ ನಾರಾಯನ ಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಉದ್ಯಮಿ ಅನಂತ ಪ್ರಭು, ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ ಸಾಲ್ಯಾನ್, ನೆಟ್ಲ ಮುಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಸಿಇಒ ಸಂಜೀವ ಪೂಜಾರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್, ಶಾಖಾಧಿಕಾರಿ ಸದಾಶಿವ ಪುತ್ರನ್, ನಿರ್ದೇಶಕರಾದ ಸಪ್ನರಾಜ್, ರಾಜೇಶ್ ಬಿ., ಗಜೇಂದ್ರ ಪ್ರಭು, ದಿವಾಕರ ದಾಸ್, ಮೈಕಲ್ ಡಿಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ. ಪೆರ್ನೆ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು. ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು. ನಿರ್ದೇಶಕಿ ವಿಜಯಕುಮಾರಿ ಇಂದ್ರ ವಂದಿಸಿದರು. ನಿರ್ದೇಶಕ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.