ಮಂಜೇಶ್ವರದಲ್ಲಿ ಭಾರೀ ಮಳೆಯ ಅವಾಂತರ : ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜಲಾವೃತ

ಮಂಜೇಶ್ವರದದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಮಂಜೇಶ್ವರ ಗ್ರಾ.ಪಂ.ನ 13ನೇ ವಾರ್ಡ್ ವಾಮಂಜೂರು ಕಜೆಯ ಕೊಪ್ಪಳ ಪ್ರದೇಶದಲ್ಲಿ ಕಳೆ ಎರಡು-ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಪರಿಸರದ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಈ ಪರಿಸರದಲ್ಲಿ ಉಪ್ಪಳ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆ ಸಂಗಮಿಸುವ ಪರಿಸರದ ಅನೇಕ ಹಳ್ಳ, ತೊರೆಗಳು ನೀರು ತುಂಬಿ ಮನೆಗಳನ್ನು ಆಕ್ರಮಿಸಿ, ಮನೆಗಳಿಗೆ ನೀರು ನುಗ್ಗಿದೆ. ಪರಿಸರದಲ್ಲಿ 20ರಷ್ಟು ಮನೆಗಳಿದ್ದು ಇದರಿಂದ ಏಳು ಕುಟುಂಬಗಳ ಪೈಕಿ ಹಲವು ಮನೆಗಳಲ್ಲಿ ವಾಸಿಸುವವರು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಇಂದು ನೆರೆ ನೀರು ನುಗ್ಗಿದ ಬಳಿಕ ಸ್ಥಳಾಂತರಗೊಂಡ ಸ್ಥಳೀಯರು ತಮ್ಮ ಮನೆಗಳಿಗೆ ಆಗಮಿಸಿ ಶುಚೀಕರಣದಲ್ಲಿ ತೊಡಗಿದ್ದಾರೆ. ಘಟನೆಯನ್ನರಿತು ಸ್ಥಳಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆಯೂ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಪಜ್ವ ಭೇಟಿ ನೀಡಿ ಮನೆಯವರ ಸ್ಥಿತಿಗತಿಗಳನ್ನು ಅವಲೋಕಿಸಿದರು.

Related Posts

Leave a Reply

Your email address will not be published.