ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ : ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ
ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ : ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ
ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು ಇಲ್ಲಿ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮ "ಬ್ಯಾಗ್ ಆಫ್ ಜಾಯ್" ಜರಗಿತು. ಸುಮಾರು 100 ವರ್ಷಗಳ ಅನುಭವ ಹೊಂದಿರುವ ಭಾರತದ ಕೆಲವೇ ಕೆಲವು ಕಂಪನಿಗಳಲ್ಲಿ ಮುತ್ತೂಟ್ ಮಿನಿ ಕೂಡ ಒಂದು. 1887ರಲ್ಲಿ ಸ್ಥಾಪಿಸಲಾದ ಕಂಪೆನಿಯುಇಂದು ಸುಮಾರು 2500 ಕೋಟಿ ವಹಿವಾಟಿನೊಂದಿಗೆ ಪ್ರಸ್ತುತ 834 ಶಾಖೆಗಳನ್ನು ಹೊಂದಿದ್ದು 3500ಕ್ಕೂಹೆಚ್ಚು ಸಕ್ರಿಯ ಉದ್ಯೋಗಿಗಳನ್ನು ಹೊಂದಿದೆ.4ನೇ ತಲೆಮಾರಿನ ಶ್ರೀಯುತ ಮ್ಯಾಥ್ಯೂ ಮುತ್ತೂಟ್ ಪ್ರಸ್ತುತ ಕಂಪೆನಿಯ ಮುಖ್ಯಸ್ಥರಾಗಿದ್ದಾರೆ.ಕಂಪೆನಿಯು ಸುಮಾರು 8 ವರ್ಷಗಳಿಂದ ಬೆಳ್ಳಾರೆಯ ಹೃದಯಭಾಗದ ಲಕ್ಷ್ಮಿ ಜಾಥ ಬಿಲ್ಡಿಂಗ್ ನ ಒಂದನೇ ಮಹಡಿಯಲ್ಲಿ ಸೀಮಾ ಫ್ಯಾನ್ಸಿಯ ಮೇಲ್ಭಾಗದಲ್ಲಿ ತನ್ನ ಶಾಖೆಯನ್ನು ಹೊಂದಿದ್ದು ವ್ಯವಹರಿಸುತ್ತಿದೆ. ಕಂಪೆನಿಯು ನಡೆಸಿಕೊಂಡು ಬಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಒಂದು ಭಾಗವಾಗಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತುವಿನಲ್ಲಿ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಯುತ ಹರೀಶ್ ರವರು ವಹಿಸಿದ್ದರು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಪನ್ನೆಯವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಶ್ರೀಯುತ ಗುರು ಕೆ.ಎಚ್ ರಿಜಿನಲ್ ಮ್ಯಾನೇಜರ್ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಬೆಂಗಳೂರು ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಸರಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಸಂಸ್ಥೆಯ ವತಿಯಿಂದ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.
ಶಾಲಾ ಸಂಚಾಲನಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಆರ್ ರೈ ಅವರು ಸಂಸ್ಥೆಯ ಕಾರ್ಯಕ್ರಮವನ್ನು ಶ್ಲಾಘಿಸಿ, ಸರ್ಕಾರಿ ಶಾಲಾ ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ದಾನಿಗಳ ಸಹಕಾರ ಅಗತ್ಯ ಎಂದರು.ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಯುತ ಅನಿಲ್ ರೈ ಹಾಗೂ ಶ್ರೀಯುತ ಮಣಿಕಂಠನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಬಿ.ಸಿ.ರೋಡ್ ಶಾಖೆಯ ಸೀನಿಯರ್ ಮ್ಯಾನೇಜರ್ ಅಭಿಜಿತ್, ಬೆಳ್ಳಾರೆ ಶಾಖೆಯ ದೀಪಕ್.ಆರ್.ಕೆ , ಕವಿತಾ.ಜೆ.ಹೆಚ್, ರಮಿತಾ ಪೂಂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ.ಪಿ ಸ್ವಾಗತಿಸಿದರು, ಬೆಳ್ಳಾರೆ ಶಾಖೆಯ ಕವಿತಾ ವಂದನಾರ್ಪಣೆಗೈದರು, ಶ್ರೀಮತಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಮಕ್ಕಳು, ಪೋಷಕರು ಮತ್ತು ಊರವರು ಉಪಸ್ಥಿತರಿದ್ದರು.