ವಿದ್ಯುತ್ ಬಿಲ್ ವಿಚಾರ, ಪವರ್ ಮ್ಯಾನ್ ಮೇಲೆ ಹಲ್ಲೆ
ಬೆಳ್ತಂಗಡಿಯಲ್ಲಿ ವಿದ್ಯುತ್ ಬಿಲ್ ವಿಚಾರವಾಗಿ ಪವರ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅಡ್ಕಾಡಿ ಕಾಂತು ಪೂಜಾರಿ ಎಂಬವರು ಹಲವಾರು ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಬಿಲ್ ಕಟ್ಟದೆ ಇರುವುದರಿಂದ ಅಲ್ಲಿನ ಪವರ್ ಮ್ಯಾನ್ ಉಮೇಶ್ ಮೇಲಾಧಿಕಾರಿಗಳ ಆದೇಶದಂತೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು ಇದೇ ಕಾರಣಕ್ಕಾಗಿ ಪವರ್ ಮ್ಯಾನ್ ಉಮೇಶ್ ಹಾಗೂ ದುಂಡಪ್ಪ ಎಂಬವರ ಮೇಲೆ ಕರ್ತವ್ಯದಲ್ಲಿ ಇರುವಾಗಲೇ ಧರ್ಮಸ್ಥಳದ ಅಜಿಕುರಿ ನಿವಾಸಿ ರಿಜೇಶ್ ಹಾಗೂ ಇತರರು ಸೇರಿ ಸೋಡದ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ರೀಜೇಶ್ ಎಂಬವನನ್ನು ಬಂಧಿಸಲಾಗಿದೆ.