ಬೆಳ್ತಂಗಡಿ :ಹೊಂಡಮಯ ರಸ್ತೆಗಳಿಗೆ ತೇಪೆ ಕಾರ್ಯ

ಬೆಳ್ತoಗಡಿತಾಲೂಕಿನಲ್ಲಿರಾಷ್ಟೀಯ ಹೆದ್ದಾರಿ 73ರಲ್ಲಿ ಗುರುವಾಯನಕೆರೆಯಿಂದ ಉಜಿರೆವರೆಗೆ ಹೊಂಡಮಯವಾಗಿರುವ ಸ್ಥಳಗಳಿಗೆ ಕಡೆಗೂ ತೇಪೆ ಕಾರ್ಯಕ್ಕೆ ಇಲಾಖೆ ಮುಂದಾಗಿದೆ.ಪೂoಜಾಲಕಟ್ಟೆಯಿoದ ಚಾರ್ಮಾಡಿ ವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗುAಡಿ ಸೃಷ್ಟಿಯಾಗಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿತ್ತು. ದುರಸ್ತಿಗೆ ಅನೇಕ ಬಾರಿ ಪ್ರತಿಭಟನೆಗಳು ನಡೆದರೂ ಮಳೆಯಿಂದಾಗಿ ದುರಸ್ತಿ ಕಾರ್ಯ ಮುಂದೂಡಲೇ ಹೋಗಿತ್ತು. ಇದೀಗ ಕಳೆದ ಕೆಲ ದಿನಗಳಿಂದ ಮಳೆ ನಿಂತಿರುವುದಿರAದ ಗುರುವಾಯನಕೆರೆಯಿಂದ ಹೊಂಡಗಳಿಗೆ ಜಲ್ಲಿ ಅಳವಡಿಸಿ ಡಾಂಬರು ಹಾಕುವ ಕಾರ್ಯ ನಡೆದ ಸಲಾಗುತ್ತಿದೆ.ನ.1 ರಂದು ತೇಪೆ ಕಾರ್ಯ ಆರಂಭಿಸಿದ್ದು,ಶಾಸಕ ಹರೀಶ್ ಪೂಂಜ ಅವರು ಕಾಮಗಾರಿ ಪರಿಶೀಲಿಸಿದರು. ಒಂದು ವಾರದ ಒಳಗಾಗಿ ತೀರ ಹದಗೆಟ್ಟ ಪ್ರದೇಶದಲ್ಲಿ ಮರುಡಾಂಬರೀಕರಣ ನಡೆಸಲಾಗುವುದು. ಉಳಿದಂತೆ ತೇಪೆ ಕಾರ್ಯ ನಡೆಯಲಿದೆ. ಈಗಾಗಲೆ ದ್ವಿಪಥ ರಸ್ತೆಗೂ ಶಿಲಾನ್ಯಾಸವಾಗಿರುವುದರಿಂದ ತಾತ್ಕಾಲಿಲವಾಗಿ ರಸ್ತೆ ಸರಿಪಡಿಸಲಾಗುವುದು ಎಂದು ಹೇಳಿದರು.
