ಶಾರದಾ ಎ.ಅಂಚನ್ ರಿಗೆ ಹುಬ್ಬಳ್ಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ವಿಶ್ವ ಕನ್ನಡ ಸಂಘ (ರಿ) ಹುಬ್ಬಳ್ಳಿ ಇವರು ಪ್ರತೀ ವರುಷ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಮುಂಬಯಿ ಸಾಹಿತಿ, ಲೇಖಕಿ ಶಾರದಾ ಎ. ಅಂಚನ್ ಇವರಿಗೆ ಸಾಹಿತ್ಯ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತೋತ್ಸವದ ಅಂಗವಾಗಿ ಕೊಡಮಾಡುವ “ವೀರರಾಣಿ ಕಿತ್ತೂರು ಚೆನ್ನಮ್ಮ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “ಯನ್ನು ರಾಜ್ಯೋತ್ಸವ ದಿನವಾದ ನವೆಂಬರ್ ೧ ರಂದು ನಗರದ ‘ಅಕ್ಕನ ಬಳಗ ಕಲಾಮಂಟಪ”ದಲ್ಲಿ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗು ಹಾಲಿ ಶಾಸಕರಾದ ಶ್ರೀ ಜಗದೀಶ್ ಶೆಟ್ಟರು ಉದ್ಘಾಟಿಸಿದರು.
ವೇದಿಕೆಯಲ್ಲಿ ಡಾ.ಚಿದಾನಂದ ಪಿ.ಮನ್ಸೂರ (ವಿಶ್ರಾಂತ ಡೀನ್ ಹಾಗೂ ಸದಸ್ಯರು,ವ್ಯವಸ್ಥಾನ ಮಂಡಳಿ,ಕೃಷಿ ವಿದ್ಯಾಲಯ ಧಾರವಾಡ)ಶ್ರೀ ಮಲ್ಲಿಕಾರ್ಜುನ್ ಸಾವುಕಾರ (ಮಾಜಿ ಚೇರ್ಮನ್ ವಾ.ಕ.ರ ಸಾರಿಗೆ ಸಂಸ್ಥೆ ಹುಬ್ಬಳ್ಳಿ) ಶ್ರೀ ರಮೇಶ ಮಹದೇವಪ್ಪನವರ (ಅಧ್ಯಕ್ಷರು,ಸಿದ್ದ ಕಲ್ಯಾಣನಗರ ಯುವಕ ಮಂಡಲ( ರಿ) ಹುಬ್ಬಳ್ಳಿ) ಡಾ.ಮೇಟಿ ರುದ್ರೇಶ (ನಿರ್ದೇಶಕರು,ಮೇರು IAS &KAS ಸ್ಟಡಿ ಸೆಂಟರ್ ಧಾರವಾಡ) ಶ್ರೀ ವೆಂಕಟ ಪ್ರದೀಪ (ಬ್ರಹತ್ ದ್ದಿಮೆದಾರರು,ಹುಬ್ಬಳ್ಳಿ) ಶ್ರೀಮತಿ ರಂಜನಾ ಪೋಳ (ಸಹಕಾರ ಸಂಘಗಳ ಉಪ ನಿಬಂಧಕರು,ಧಾರವಾಡ ) ಡಾ.ಶಾರದಾ ಎಂ .ಮತ್ತಿಕೊಪ್ಪ( ಸೆಕ್ರೆಟರಿ,ಪರಿವರ್ತನಾ ಎಜ್ಯುಕೇಶನ್ ಮತ್ತು ಟ್ರಸ್ಟ್,ಹುಬ್ಬಳ್ಳಿ).ಶ್ರೀಮತಿ ಪದ್ಮಾವತಿ ಪಿ.ಬಾಗಲಕೋಟ (ರಾಜ್ಯೋತ್ಸವ ಪ್ರಶಸ್ತಿ ವಿಜೇತರು) ಮುಂತಾದ ಗಣ್ಯರು ಉಪಸ್ಥಿತರಿದ್ದರು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾರದಾ ಅಂಚನ್ ಅವರ ಪತಿ ಆನಂದ್ ಅಂಚನ್ ಕೂಡ ವೇದಿಕೆಯಲ್ಲಿದ್ದರು