HomeFresh Newsಬೆಂಗಳೂರು|| ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಡಿಸಿಎಂ ಒಪ್ಪಿಗೆ: ಡಿಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ...

ಬೆಂಗಳೂರು|| ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಡಿಸಿಎಂ ಒಪ್ಪಿಗೆ: ಡಿಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಗಲ್ಫ್ ಕನ್ನಡಿಗರು

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕಲೀಲ್ ಹೇಳಿದರು.

ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕೆಎನ್‍ಆರ್‍ಐಗೆ ಕಳೆದ ಕೆಲವು ವರ್ಷಗಳಿಂದ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಿರಲ್ಲಿಲ್ಲ. ಈ ಸಮಿತಿಗೆ ಅಧ್ಯಕ್ಷರು ಮುಖ್ಯಮಂತ್ರಿಗಳೇ ಆಗಿದ್ದು, ಸರಕಾರದ ವತಿಯಿಂದ ಒಬ್ಬರು ಉಪಾಧ್ಯಕ್ಷರ ನೇಮಕಾತಿ ಆಗಬೇಕಿತ್ತು.

ಈ ಹಿಂದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೊರನಾಡ ಕನ್ನಡಿಗರು ಸಲ್ಲಿಸಿದ ಬೇಡಿಕೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಈ ಸಂಬಂಧ ಗಲ್ಫ್ ಕನ್ನಡಿಗರ ತಂಡವೊಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಪ್ರಚಾರ ಪಡಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ತಕ್ಷಣ ಉಪಾಧ್ಯಕ್ಷರನ್ನ ನೇಮಕ ಮಾಡುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದರು.

ಈ ಸುದ್ದಿ ಹೊರನಾಡ ಕನ್ನಡಿಗರಿಗೆಲ್ಲ ಸಂತಸವನ್ನು ತಂದಿದೆ, ಇದಕ್ಕಾಗಿ ಕರ್ನಾಟಕ ಸರಕಾರವನ್ನು ಅಭಿನಂದಿಸುತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಗಲ್ಫ್ ಕನ್ನಡಿಗರ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಕನ್ನಡಿಗರ ಕನ್ನಡ ಕೂಟ ಅಧ್ಯಕ್ಷ ಸಾಧನ ದಾಸ್, ಒಮಾನ್ ಕನ್ನಡಿಗ ರಮಾನಂದ ಪ್ರಭು, ಸೌದಿ ಅರೇಬಿಯಾ ನಿವಾಸಿ ಇಬ್ರಾಹಿಂ ಹುಸೇನ್ ಮತ್ತಿತರರು ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments