ನಳಿನ್ ಕುಮಾರ್ ಕಟೀಲ್ ಹೇಳಿಕೆ ಸಮರ್ಥಿಸಿದ ಶಾಸಕ ಭರತ್ ಶೆಟ್ಟಿ

ಬಿಜೆಪಿ ರಾಜ್ಯಾದ್ಯಕ್ಷರು ಕಾರ್ಯಕರ್ತರಿಗೆ ರಸ್ತೆ ವಿಚಾರ ಬಿಡಿ ಅಂತ ಹೇಳಿದ್ದಾರೆ, ರಸ್ತೆ ಮಾಡುವುದು ಚುನಾಯಿತ ಜನ ಪ್ರತಿನಿಧಿಗಳ ಕೆಲಸ, ಸಮಾಜದಲ್ಲಿ ವಿಷದ ವಾತಾವರಣ ನಿರ್ಮೂಲನೆ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಸಮರ್ಥಿಸಿಕೊಂಡಿದ್ದಾರೆ.
ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಮ್ಮ ಅವಧಿಯಲ್ಲಿ ಗೋ ಹತ್ಯೆ ಕಡಿಮೆ ಆಗಿದೆ. ಕಾಂಗ್ರೆಸ್ ಕೂಡಾ ಇದಕ್ಕೆ ಬೆಂಬಲ ನೀಡಿದ್ರೆ ಗೋ ಸಂತತಿ ಬೆಳೆಯುತ್ತದೆ. ಸುರತ್ಕಲ್‍ನಲ್ಲಿ ಯಾವುದೇ ಕೋಮು ಘರ್ಷಣೆ ಇಲ್ಲ. ಕೆಲವೊಂದು ಘಟನೆಗಳು ರಾಜ್ಯದ ಎಲ್ಲಾ ಕಡೆ ನಡೆದಂತೆ ನಡೆದಿದೆ. ಆದ್ರೆ ಸುರತ್ಕಲ್ ನಲ್ಲಿ ಆದಾಗ ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತದೆ. ರಾಜಕೀಯವಾಗಿ ಘಟನೆಯ ಲಾಭ ಪಡೆಯುವವರಿಂದ ಈ ರೀತಿ ಆಗುತ್ತಿದೆ. ಇದು ಒಬ್ಬ ಜನಪ್ರತಿನಿಧಿ ನಿಯಂತ್ರಿಸಲು ಸಾಧ್ಯವಿಲ್ಲ. ಸಮುದಾಯದ ಮುಖಂಡರು ಬುದ್ದಿವಾದ ಹೇಳಬೇಕು ಎಂದು ಹೇಳಿದರು.
